ನಿಮಗೆಲ್ಲಾ ಗೊತ್ತಿರೋ ಹಾಗೆ ಸಿರಿಯಾ ಇಂದು ಉಗ್ರ ಸಂಘಟನೆಯ ತಾಣ. ಐಸಿಸ್ ಉಗ್ರರ ಕಪಿ ಮುಷ್ಠಿಗೆ ಒಳಗಾಗಿರುವ ಈ ರಾಷ್ಟ್ರದ ಜನರಿಗೆ ಪ್ರತಿ ದಿನವು ಪ್ರತಿ ಕ್ಷಣವು ಸಾವಿನ ಜೊತೆ ಸೆಣಸಾಡುವ ಘೋರ ಪರಿಸ್ಥಿತಿ ನಿರ್ಮಾಣವಾಗಿದೆ. ಐಸಿಸ್ ಉಗ್ರ ಸಂಘಟನೆಗಳ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಇಡಿ ವಿಶ್ವವೇ ಈ ಉಗ್ರರ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ. ಇಲ್ಲಿ ನಾವು ಮಾತಾಡೋಕೆ ಬಂದಿರೋದು ಐಸಿಸ್ ಉಗ್ರರ ಬಗ್ಗೆ ಅಲ್ಲ. ಬದಲಾಗಿ ಐಸಿಸ್ ಉಗ್ರ ಸಂಘಟನೆಯಲ್ಲಿ ಜೀತದಾಳಾಗಿ, ಅವರು ಕೊಟ್ಟ ಲೈಂಗಿಕ ಕಿರುಕಳವನ್ನೆಲ್ಲಾ ಅನಿಭವಿಸಿ, ಸಾವಿನ ಮನೆಯಿಂದ ಜವರಾಯನನ್ನೇ ಗೆದ್ದು ಹೊರ ಬಂದ ಓರ್ವ ದಿಟ್ಟ ಮಹಿಳೆಯ ಸುದ್ದಿಯನ್ನು. ಉಗ್ರರ ಲೈಂಗಿಕ ದೈರ್ಜನ್ಯಕ್ಕೆ ಒಳಗಾಗಿ ಸಾವಿರಾರು ಸಿರಿಯಾ ಮಹಿಳೆಯರು ಇಂದಿಗೂ ಅವರ ದರ್ಪಕ್ಕೆ ಬೇಸತ್ತು ಹೋಗಿದ್ದಾರೆ. ಅವರಂತೆಯೇ ಈ ‘ನದಿಯಾ ಮುರದ್’ ಒಬ್ಬರು.
ನದಿಯಾ ಮುರದ್.. ನಿಮಗೆಲ್ಲಾ ಈ ಹೆಸರು ಚಿರ ಪರಿಚಿತ ಅನ್ಕೊಳ್ತೇನೆ. ಐಸಿಸ್ ಉಗ್ರರಿಂದ ಹಲವಾರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ. ಇದೀಗ ಅದೇ ಮಹಿಳೆ ಉಗ್ರರ ಮಟ್ಟ ಹಾಕಲು ಹಾಗೂ ಸಿರಿಯಾ ದೇಶದ ಮಹಿಳೆಯರನ್ನು ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ. ಉಗ್ರರಿಂದ ಹೇಗೋ ತಪ್ಪಿಸಿಕೊಂಡು ಬಂದು ಅಲ್ಲಿನ ಕ್ರೂರ ಮುಖಗಳ ಬಗ್ಗೆ ಇಡೀ ಜಗತ್ತಿಗೆ ಸಾರಿದ ವಿಶ್ವದ ಮೊಟ್ಟ ಮೊದಲ ಮಹಿಳೆ.
ಇವರ ಈ ಧೈರ್ಯ ಹಾಗೂ ಹೋರಾಟದ ಕಿಚ್ಚನ್ನು ಕಂಡ ಅಮೇರಿಕಾ ಅವರನ್ನು ಮಾನವ ಕಳ್ಳ ಸಾಗಾಣಿಕಾ ನಿಗ್ರಹ ಧಳದ ರಾಯಭಾರಿಯಾಗಿ ನೇಮಿಸಿಕೊಂಡಿದೆ. ಅಮೇರಿಕಾದ ಮಾನವ ಹಕ್ಕುಗಳ ನ್ಯಾಯಾವಾದಿಗಳಾದ ಅರ್ನಲ್ ಕ್ಲೂನಿ ಅವರೊಂದಿಗೆ ಕೈ ಜೋಡಿಸಿ ತನ್ನಂತೆ ಪಾಪಿಗಳ ನೆಲೆಯಲ್ಲಿ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಸಾವಿರಾರು ಮಹಿಳೆಯರ ರಕ್ಷಣೆಕ್ಕೆ ತನ್ನ ಜೀವವನ್ನೆ ಪಣಕ್ಕಿಟ್ಟಿ ನಿಂತಿದ್ದಾಳೆ.
ಅಂದು 2014ರ ಇಸವಿ. 19ರ ಹರೆಯದ ಮುರದ್ ಅವರನ್ನು ಐಸಿಸ್ ಸಂಘಟನೆಯು ಮೌಸಲ್ ನಗರದಲ್ಲಿ ಸೆರೆಯಾಳಾಗಿ ಇಟ್ಟು ಪ್ರತಿ ದಿನವೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗುತ್ತಿದ್ದರು. ಅಷ್ಟೇ ಅಲ್ಲ ಅವಳ ಇಡೀ ಕುಟುಂಬದ ಸದಸ್ಯರನ್ನು ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂದರ್ಭ ನಡೆದ ಉಗ್ರರ ಅಟ್ಟಹಾಸಕ್ಕೆ ಇಡೀ ನಗರವೇ ಸ್ಮಶಾನದಂತಾಗಿತ್ತು. ಉಗ್ರರ ಧಾಳಿಗೆ ಸುಮಾರು 300ಕ್ಕೂ ಅಧಿಕ ಅಮಾಯಕರು ಬಲಿಯಾದರು. ನೂರಾರು ಜನರು ಗಾಯಗೊಂಡರು. ಮೌಸುಲ್ ನಗರದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ನದಿಯಾ ಮೇಲೆ ಕಾಮುಕ ಉಗ್ರರು ಆಕೆ ನಿಶಕ್ತಳಾಗುವವರೆಗೆ ಘೋರ ಅತ್ಯಾಚಾರ ಎಸಗುತ್ತಿದ್ದರು. ಒಂದಲ್ಲಾ ಎರಡಲ್ಲಾ ಸ್ವಾಮಿ.. ಬರೋಬ್ಬರಿ ಎರಡು ವರ್ಷಗಳ ಕಾಲ…! ಇದನ್ನ ಕೇಳುತ್ತಲೇ ನಮ್ಮ ಕಣ್ಣಾಲಿಗಳು ತೇವಗೊಂಡಿರುವಾಗ, ಆ ದಿಟ್ಟ ಮಹಿಳೆಯ ಮನದಲ್ಲಿ ಇನ್ನೆಷ್ಟು ಪ್ರಮಾಣದಲ್ಲಿ ಬೆಂಕಿಯ ಕಿಚ್ಚು ಉರಿದಿರಬಹುದು ನೀವೇ ಆಲೋಚಿಸಿ..!
ಕೊನೆಗೆ ತನ್ನ 21ನೆ ವಯಸ್ಸಿನಲ್ಲಿ ಹೇಗೋ ಆ ಉಗ್ರರ ಉಪಟಳದಿಂದ ಪಾರಾದ ಈಕೆ ಅಮೆರಿಕಾದ ನ್ಯಾಯವಾದಿ ಕ್ಲೂನಿ ಹಾಗೂ ಪ್ರಧಾನಿಯನ್ನು ಭೇಟಿ ಮಾಡಿ ತನ್ನ ಮೇಲಾದ ದೌರ್ಜನ್ಯ ಹಾಗೂ ಉಗ್ರರ ದೌರ್ಜನ್ಯಕ್ಕೆ ಸೆರೆಯಾಳಾಗಿರುವ ಸಾವಿರಾರು ಸಿರಿಯಾ ಹೆಣ್ಣು ಮಕ್ಕಳನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಳು. ಅಲ್ಲಿಂದ ನದಿಯಾ ತಾನು ಅನುಭವಿಸಿದ ಬಹು ಕ್ರೂರ ದಿನಗಳನ್ನು ಹಾಗೂ ಐಸಿಸ್‍ನ ಕ್ರೂರ ಮುಖಗಳ ವಿರುದ್ದ ಪ್ರಚಾರ ಮಾಡ ತೊಡಗಿದಳು. ವಿಶ್ವದಾದ್ಯಂತ ಈಕೆಯ ಜೀವನದ ಕುರಿತಾಗಿ ಭಾರಿ ಸುದ್ದಿಯನ್ನು ಕಂಡಿತು. ಅವಳ ನೆರವಿಗಾಗಿ ನೂರಾರು ಜನರು ಮುಂದೆ ಬಂದು ನಿಂತರು. ಅಷ್ಟೇ ಅಲ್ಲ ಇಡೀ ಅಮೇರಿಕಾವೇ ಈಕೆಗೆ ಬೆಂಬಲವಾಗಿ ನಿಂತಿತು. ನದಿಯಾ ಅವಳ ಕಾರ್ಯ ದಕ್ಷತೆ, ದಿಟ್ಟತನ ಮನಗಂಡು ಇವಳ ಹೆಸರು ವಿಶ್ವದ ಜೀವಮಾನ ಪ್ರಶಸ್ತಿಯಾದ ನೊಬೆಲ್ ಶಾಂತಿ ಪುರಸ್ಕಾರಕ್ಕೂ ನಾಮನಿರ್ದೇಶನ ಪಡೆಯಿತು.
ತಾನು ಹೋದ ಸ್ಥಳದಲ್ಲೆಲ್ಲಾ ತನ್ನ ಮೇಲಾದ ದೌರ್ಜನ್ಯ ಹಾಗೂ ಐಸಿಸ್ ಉಗ್ರರ ಧಾಳಿಗೆ ಒಳಗಾಗಿರುವ ಸಾವಿರಾರು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ನಿಂತು ಸ್ವತಂತ್ರರಾಗುವಂತೆ ಪ್ರೇರೆಪಿಸುತ್ತಿದ್ದಾಳೆ. ಉಗ್ರರ ಕಪಿಮುಷ್ಠಿಯಿಂದ ಪಾರಾಗಿ ಬಂದ ನದಿಯಾ ಒಂದು ನಿರಾಶ್ರಿತ ಪ್ರದೇಶದಲ್ಲಿ ಬಂದು ನೆಲೆನಿಂತಳು ಅದಾದ ನಂತರ ಆಕೆ ಜರ್ಮನಿಗೆ ಪ್ರಯಾಣ ಬೆಳೆಸಿ ಅಲ್ಲಿ ಆಶ್ರಯ ಪಡೆದಳು ನದಿಯಾ ಮಾತ್ರವಲ್ಲ ಈಕೆಯ ಇನ್ನಿಬ್ಬರು ಸಹೋದರಿಯರೂ ಕೂಡ ಬಂಧನಕ್ಕೊಳಗಾಗಿ ಉಗ್ರರಿಂದ ತಪ್ಪಿಸಿಕೊಂಡವರು.
ನದಿಯಾ ಮೇ ತಿಂಗಳಲ್ಲಿ ಅಮೇರಿಕಾ ದೇಶಕ್ಕೆ ಒಂದು ಎಚ್ಚರಿಕೆಯನ್ನು ನೀಡಿದಳು. ಅದೇನಂದರೆ.. ಐಸಿಸ್ ಉಗ್ರ ಸಂಘಟನೆಯಿಂದ ನಿಮ್ಮ ದೇಶಕ್ಕೆ ಎಂದಿಗೂ ಅಪಾಯವೇ.. ನೀವೇನಾದ್ರೂ ಉಗ್ರರನ್ನು ಸದೆಬಡಿಯದಿದ್ದರೆ ಅವರು ನಿಮ್ಮನ್ನು ಸದೆ ಬಡಿಯಲು ಎಲ್ಲಾ ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಳು. ಅಲ್ಲಿಂದ ಅಮೇರಿಕಾ ಎಚ್ಚೆತ್ತುಕೊಂಡು ಇದೀಗ ನರ ಮೇಧ ಉಗ್ರರ ಮೇಲೆ ವೈಮಾನಿಕ ಧಾಳಿಯಲ್ಲಿ ತೊಡಗಿ ಅನೇಕ ಉಗ್ರರನ್ನು ಸದೆ ಬಡಿದಿದ್ದಾರೆ
ಅಮೇರಿಕಾದ ಹಾಲಿವುಡ್ ನಟನ ಪತ್ನಿ ಹಾಗೂ ಅಂತರಾಷ್ಟ್ರೀಯ ನ್ಯಾಯ ಮಂಡಳಿಯಲ್ಲಿ ವಕೀಲಿ ವೃತ್ತಿ ಮಾಡುತ್ತರುವ ಅರ್ನಲ್ ಕ್ಲೂನಿ ಅವರು ನದಿಯಾಳ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ ನಿಂತಿದ್ದಾರೆ. ಹಾಗೂ ಆಕೆಯಂತೆಯೇ ಅನ್ಯಾಯಕ್ಕೊಳಗಾಗಿರುವವರಿಗೆ ಹಾಗೂ ಸಮಾಜದಲ್ಲಿ ಸಮಾನರಂತೆ ಬಾಳಲು ಸಹಾಯ ಮಾಡುತ್ತಿದ್ದಾರೆ. ಹೀಗೆ ಉಗ್ರರ ಚಿತ್ರ ಹಿಂಸೆಗೆ ಒಳಗಾಗಿ ಹೇಗೋ ತಪ್ಪಿಸಿಕೊಂಡು ಬಂದು ಸಿರಿಯಾದಲ್ಲಿ ಉಗ್ರರ ನೆಲೆಯಲ್ಲಿ ಸೆರೆಯಾಳಾಗಿರುವ ಹೆಣ್ಣು ಮಕ್ಕಳ ರಕ್ಷಣೆಗೆ ಪಣ ತೊಟ್ಟಿರುವ ನದಿಯಾಗೆ ಅಮೇರಿಕಾ ಈಗ ಬಹುದೊಡ್ಡ ಸ್ಥನವನ್ನು ನೀಡಿ ಆಕೆಯ ಬೆಂಬಲವಾಗಿ ನಿಂತಿದೆ.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…