ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ನಡೆಸಿರುವ ಪ್ರತಿಭಟನೆಯನ್ನು ಖಂಡಿಸಿ ಇಂದು ತಮಿಳನಾಡು ಬಂದ್ ಆಚರಿಸುತ್ತಿದ್ದು, ಪ್ರತಿ ಪಕ್ಷ ನಾಯಕ ಮತ್ತು ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್ ಅವರು ಕರ್ನಾಟಕದ ವಿರುದ್ದ ಇಗ್ಮೋರ್ ರೈಲು ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.
ಇನ್ನು ತಮಿಳುನಾಡಿನಲ್ಲಿ ನಡಿಯುತ್ತಿರುವ ಪ್ರತಿಭಟನೆ ಶಾಂತಿಯುತ ನಡೆಸುವ ಉದ್ದೇಶದಿಂದ ಕರ್ನಾಟಕದ ವಾಹನಗಳನ್ನು ತಮಿಳುನಾಡಿಗೆ ಸಂಚರಿಸದಂತೆ ಗಡಿ ಚೆಕ್ ಪೋಸ್ಟ್‍ಗಳಲ್ಲಿ ತಡೆ ಹಿಡಿಯಲಾಗುತ್ತಿದೆ. ಪ್ರತಿಭಟನಾ ವೇಳೆ ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಜಯ ಲಲಿತಾ ಅವರಿಗೆ ಪತ್ರ ಬರೆದಿದ್ದಾರೆ.
ಬಂದ್ ಹಿನ್ನಲೆಯಲ್ಲಿ ಉಭಯ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಂದ್ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುತ್ತಿದೆ. ಮುನ್ನಚ್ಚರಿಕಾ ಕ್ರಮವಾಗಿ ತಮಿಳುನಾಡಿನಲ್ಲಿ ಸುಮಾರು 1.8 ಲಕ್ಷ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.
ಇನ್ನು ತಮಿಳುನಾಡು ಬಸ್ ನಿಲ್ದಾಣಗಳು, ಕನ್ನಡಿಗರು ಇರುವ ಪ್ರದೇಶಗಳಲ್ಲಿ ಪೊಲೀಸ್ ಫುಲ್ ಸೆಕ್ಯೂರಿಟಿ ನೀಡುತ್ತಿದ್ದು, ತಮಿಳುನಾಡು ಸರ್ಕಾರದ ಆದೇಶದಂತೆ ಸರ್ಕಾರಿ ಬಸ್ ಸಂಚಾರವನ್ನು ಸುಗಮಗೊಳಿಸಲಾಗಿದೆ. ತಮಿಳುನಾಡು ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿಲ್ಲ. ಕೆಲವು ಖಾಸಗೀ ಶಾಲಾ ಕಾಲೇಜುಗಳು ರಜೆ ನೀಡಿವೆ.
POPULAR STORIES :
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..