ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!

Date:

ಕಾವೇರಿ ನದಿ ನೀರಿನ ಕುರಿತಂತೆ ಸೆ.20ರವರೆ ತಮಿಳುನಾಡಿಗೆ ನೀರು ಹರಿಸಬೇಕು ಎಂದು ತೀರ್ಪು ನೀಡಿದ್ದು, ರಾಜ್ಯದ ಜನರ ಆಕ್ರೋಶದ ನಡೆವೆಯೂ ಸುಪ್ರೀಂ ಕೋರ್ಟ್‍ನ ಆದೇಶಕ್ಕೆ ತಲೆ ಬಾಗಿದ ಸಿದ್ದರಾಮಯ್ಯ ಸೆ.20ಕ್ಕೆ ಸುಪ್ರಿಂ ಕೋರ್ಟ್ ಮತ್ತೆ ವಿಚಾರಣೆ ಮುಂದುವರೆಸಲಿದೆ. ಸೆ.20 ರ ನಂತರವೂ ಕರ್ನಾಟಕ ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನಿಡಿದ್ದೆ ಆದಲ್ಲಿ ರಾಜ್ಯದ ಜನರಿಗಾಗಿ ಸರ್ಕಾರ ವಜಾ ಆದರೂ ಚಿಂತೆ ಇಲ್ಲ ಎಂದು ಆಪ್ತ ಸಚಿವರೆದುರು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಪ್ರತೀ ಬಾರಿಯೂ ಕಾವೇರಿ ನೀರಿನ ವಿಷಯಕ್ಕೆ ಸಂಬಂದಿಸಿದಂತೆ ನಮ್ಮ ರಾಜ್ಯ ಅನ್ಯಾಯಕ್ಕೊಳಗಾಗುತ್ತಾ ಇದೆ. ಸೆ.20ವರೆಗೆ ನೀರು ಬಿಡುವುದೇ ಬಹಳ ಕಷ್ಟಕರವಾಗಿರುವಾಗ ಸೆ.20ರ ನಂತರವೂ ನೀರು ಹರಿಸಬೇಕು ಎಂದರೆ ಸರ್ಕಾರ ಬಿದ್ದರೆ ಬೀಳಲಿ ನಾನು ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿ ಜನತಾ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದಿದ್ದಾರೆ.
ಉನ್ನತ ಮೂಲಗಳು ಹೇಳಿರುವ ಪ್ರಕಾರ ಸೆ.20ರ ನಂತರವೂ ತಮಿಳುನಾಡಿಗೆ ನೀರು ಹರಿಸಬೇಕು ಎಂದು ತೀರ್ಪು ನೀಡಿದ್ದೇ ಆದಲ್ಲಿ ಕಾವೇರಿಯನ್ನೇ ನೆಚ್ಚಿಕೊಂಡ ಕೋಟ್ಯಾಂತರ ಜನರಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಜನರ ಮುಂದೆ ನಿಮಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕೂರುವ ಬದಲಿಗೆ ಸಿಎಂ ಪಟ್ಟದಿಂದ ಕೆಳಗಿಳಿಯುವುದೇ ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್ 20ರ ನಂತರವೂ ನೀರು ಬಿಡಬೇಕು ಎಂದು ಆದೇಶ ಹೊರಡಿಸಿದರೆ, ಮಹಾರಾಷ್ಟ್ರದಲ್ಲಿ ಸೃಷ್ಠಿಯಾದ ಜಲ ಕ್ಷಾಮ ನಮ್ಮ ರಾಜ್ಯದಲ್ಲೂ ಸಂಭವಿಸಬಹುದು ಎಂದಿರುವ ಸಿಎಂ, ಕುಡಿಯುವ ನೀರಿಲ್ಲದೇ ಜಲ ಕ್ಷಾಮ ಸೃಷ್ಠಿಸಿಕೊಳ್ಳಲು ನಾನು ತಯಾರಿಲ್ಲ. ಅದಕ್ಕಿಂತ ಮುಖ್ಯವಾಗಿ ನೀರಿಗಾಗಿ ರಾಜ್ಯದಲ್ಲಿ ಹಾಹಾಕಾರ ಬರುವ ಪರಿಸ್ಥತಿ ಜನರಿಗೆ ಎದುರಾದರೆ, ಅದನ್ನು ನೋಡಿಕೊಂಡು ಈ ಸ್ಥಾನದಲ್ಲಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ನಡೆದರೆ ಪರಿಣಾಮ ಏನಾಗಬಹುದು..? ಕೋರ್ಟ್ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರಕ್ಕೆ ವಜಾ ಮಾಡ ಬಹುದು. ಕೇಂದ್ರ ಸರ್ಕಾರವೇ ಸೇನೆಯನ್ನು ಮುಂದಿಟ್ಟುಕೊಂಡು ರಾಜ್ಯದ ಕಾವೇರಿ ನದಿ ಪಾತ್ರಗಳ ಜಲಾಶಯಗಳಿಂದ ನೀರು ಹರಿಸಬಹುದು. ಹಾಗೆಂದ ಮಾತ್ರಕ್ಕೆ ಕೇವಲ ಅಧಿಕಾರದ ಆಸೆಗಾಗಿ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿರುವುದನ್ನು ಕಂಡು ಸುಮ್ಮನೆ ಕೂರಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಸೆ 20ರ ನಂತರವೂ ಕೋರ್ಟ್ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶ ಹೊರಡಿಸಿದರೆ, ತೀರ್ಪನ್ನು ಉಲ್ಲಂಘಿಸಲು ನಾನು ಸದಾ ಸಿದ್ಧ ಎಂದಿದ್ದಾರೆ. ಅಧಿಕಾರದಲ್ಲಿರುವ ಓರ್ವ ಪ್ರಜಾ ಪ್ರತಿನಿಧಿ ಆ ಸ್ಥಾನದಿಂದ ಕೆಳಗಿಳಿಯ ಬೇಕು ಅಂದ್ರೆ ಅದು ಅಸಾಧ್ಯವಾದದ್ದು, ಹಾಗೆಂದ ಮಾತ್ರಕ್ಕೆ ರಾಜ್ಯದ ಜನರಿಗೆ ನೀರನ್ನೂ ದೊರಕಿಸಿಕೊಡುವಲ್ಲಿ ವಿಫಲನಾಗಿ ಜನರ ನೋವನ್ನು ನೋಡುವುದು ಅಸಾಧ್ಯ ಎಂದು ತನ್ನ ಮನದಾಳದ ಮಾತನ್ನು ತನ್ನ ಆಪ್ತರೊಂದಿಗೆ ವ್ಯಕ್ತ ಪಡಿಸಿದ್ದಾರೆ
ಸೆ.20 ಮೇಲೆ ಕಾವೇರಿ ನೀಡು ಹರಿಬೇಕು ಎಂದರೆ ತನ್ನ ಅಧಿಕಾರ ತ್ಯಾಗಕ್ಕೂ ಸಿದ್ದ ಎಂದು ಹೇಳಿರುವ ಸಿದ್ದರಾಮಯ್ಯನವರ ಮಾತು ಇದೀಗ ದೆಹಲಿಯವರೆಗೂ ಹೋಗಿದ್ದು, ಇದರ ಬೆನ್ನಲ್ಲೇ ರಹಸ್ಯ ಸಂಧಾನ ಪ್ರಕ್ರಿಯೆಗಳು ಆರಂಭಗೊಂಡಿವೆ. ಕಾವೇರಿ ನದಿ ತೀರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೆ ತಮಿಳುನಾಡಿಗೆ ನೀರು ಹರಿಸಬಹುದಿತ್ತು. ಆದರೆ ಇಲ್ಲಿ ಉತ್ತಮ ಮಳೆಯಾಗಿಲ್ಲ. ಹೀಗಿರುವಾಗ ಸೆ.20ರ ನಂತರವೂ ನೀರು ಹರಿಸಬೇಕು ಎಂದು ಕೋರ್ಟ್ ಆದೇಶ ನೀಡದಂತೆ ಎಚ್ಚರ ವಹಿಸಬೇಕು ಎಂದು ದೆಹಲಿ ಮಟ್ಟದಲ್ಲಿ ಸಂಧಾನ ಮಾತುಕತೆ ನಡೆಯುತ್ತಿವೆ.
ಒಂದು ವೇಳೆ ಕೋರ್ಟ್ ಆದೇಶ ನೀಡಿದ್ದೇ ಆದಲ್ಲಿ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದಂತೂ ಖಂಡಿತ ಅಷ್ಟೇ ಅಲ್ಲ ಸುಪ್ರೀಂ ಆದೇಶವನ್ನು ಅವರು ಕಡಾ ಖಂಡಿತವಾಗಿ ವಿರೋಧಿಸುತ್ತಾರೆ. ಈ ವೇಳೆ ಕೇಂದ್ರ ಸರ್ಕಾರದ ಅಧಿನದಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಾಗೂ ತಮಿಳುನಾಡಿಗೆ ನೀರು ಬಿಡಲು ಕೇಂದ್ರಕ್ಕೆ ಆದೇಶ ನೀಡುತ್ತದೆ. ಕೇಂದ್ರ ಸರ್ಕಾರವೇನಾದರೂ ನೀರು ಬಿಟ್ಟಿದ್ದೇ ಆದಲ್ಲಿ ರಾಜ್ಯದ ಜನತೆ ದಂಗೆ ಏಳುವುದಂತೂ ಖಂಡಿತ. ಇನ್ನು ಚುನಾವಣೆ ಆರು ತಿಂಗಳು ಬಿಟ್ಟು ನಡೆದರೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿ ಭಾರಿ ಮೊತ್ತದಿಂದ ಮತ್ತೆ ಕಾಂಗ್ರೇಸ್ ಆಳ್ವಿಕೆಗೆ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ಇನ್ನು ಹೆಚ್ಚಾಗಲಿದೆ. ಇದಕ್ಕೆ ಅವಕಾಶ ನೀಡಬಾರದು ಎಂದಾದರೆ ಸೆ.20 ನಂತರ ತಮಿಳುನಾಡಿಗೆ ನೀರು ಬಿಟ್ಟಿದ್ದು ಸಾಕು ಮುಂದಿನ ದಿನಗಳಲ್ಲಿ ಕಾವೇರಿ ನದಿ ಪ್ರದೇಶದಲ್ಲಿ ಮಳೆ ಬಂದರೆ ಕರ್ನಾಟಕದಿಂದ ನೀರು ಬಿಡುಗಡೆ ಮಾಡುತ್ತದೆ ಎಂಬ ನಂಬಿಕೆ ಮೂಡಿಸಬೇಕು ಎಂದು ದೆಹಲಿ ನಾಯಕರಿಗೆ ಸಂಧಾನಕಾರರು ವಿವರಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

POPULAR  STORIES :

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!

ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...