ಸ್ಯಾಂಡಲ್ ವುಡ್ ಸಾರಥಿ ನಟ ದರ್ಶನ್’ಗೆ ಬಿಗ್ ರಿಲೀಫ್ ಸಿಗುವ ಸಿಗುವ ಸಾದ್ಯತೆ ದಟ್ಟವಾಗಿದೆ. ನಟ ದರ್ಶನ್ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ಆರ್ ಆರ್ ನಗರ ಪೊಲೀಸರು ಡಿ ಬಾಸ್ ಗೆ ಕ್ಲೀನ್ ಚಿಟ್ ಕೊಡಲು ಮುಂದಾಗಿದ್ದಾರೆ ಏನ್ನುತ್ತಿದೆ ಪೊಲೀಸ್ ಮೂಲಗಳು. ನಟ ದರ್ಶನ್ ಮನೆಯ ನಾಯಿ ಕಳೆದ ತಿಂಗಳು ೨೮ ರಂದು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿದ್ದ ಕಾರಣ ನಾಯಿ ದಾಳಿಗೆ ಒಳಗಾದ ಮಹಿಳೆ ನಟ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಪೊಲೀಸ್ ಠಾಣೆ ಕದತಟ್ಟಿದ್ದರು.
ಘಟನೆ ಸಂಬಂದ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ದೂರು ದಾಖಲಿಸಿದ್ದರು.ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ದರ್ಶನ್ ಹಾಗೂ ಮನೆ ಕೆಲಸದವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಘಟನೆ ಬಗ್ಗೆ ಇಬ್ಬರ ಬಳಿ ಆರ್ ಆರ್ ನಗರ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು.
ಪ್ರಕರಣದ ಆರೋಪಿಗಳಾಗಿದ್ದ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಆರ್ ಆರ್ ನಗರ ಪೊಲೀರು ತಯಾರಿ ಮಾಡುತ್ತಿದ್ದಾರೆ.ಪ್ರಕರಣದಲ್ಲಿ ದರ್ಶನ್ ಪಾತ್ರ ಅಷ್ಟಾಗಿ ಕಂಡು ಬರದ ಕಾರಣ ಪ್ರಕರಣದ ಚಾರ್ಜ್ ಶೀಟ್ ನಿಂದ ನಟ ದರ್ಶನ್ ಕೈಬಿಟ್ಟು ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೇ.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್’ಗೆ ಬಿಗ್ ರಿಲೀಫ್.!?
Date: