ನಾಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟಿದ ದಿನ. ಅಭಿಮಾನಿಗಳು ಅವರನ್ನ ನೋಡಿ ವಿಶ್ ಮಾಡ್ಬೇಕು ಅಂತಾ ಕಾಯ್ತಾ ಇರ್ತಾರೆ. ಸೋ ಹೀಗಾಗಿ, ಅವರು ಅಭಿಮಾನಿಗಳಿಗೆ ಜನ್ಮದಿನೋತ್ಸವಕ್ಕೆ ಕರೆ ನೀಡಿದ್ದಾರೆ. ಜನ್ಮದಿನಕ್ಕೆ ಫ್ಯಾನ್ಸ್ ಗೆ ಆಹ್ವಾನ ಕೊಟ್ಟ ರೋರಿಂಗ್ ಸ್ಟಾರ್ ಬರ್ತಡೆ ಆಚರಿಸಿಕೊಳ್ಳಲು ಸಿದ್ದರಾಗಿದ್ದಾರೆ.
ಈ ವೇಳೆ ಮಾತನಾಡಿದ ಅವರು “ಇಷ್ಟು ವರ್ಷ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ.ಯಾಕೆ ಅನ್ನೋ ಕಾರಣ ನಿಮಗೆ ಗೊತ್ತಿದೆ.ಈ ಬಾರಿ ಸೇರುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ನಿಮ್ಮನ್ನು ಭೇಟಿ ಮಾಡುತ್ತಿದ್ದೇನೆ. ವಸಂತ ನಗರದ ಅಂಬೇಡ್ಕರ್ ಭವನದ ಹಿಂಬದಿಯಲ್ಲಿರುವ ಜಾಗದಲ್ಲಿ ಭೇಟಿಯಾಗೋಣ.ನನ್ನನ್ನು ನೋಡಲು..ಭೇಟಿಯಾಗುವ ಇಚ್ಛೆ ಇರುವವರು ಬರಬಹುದು.ಹಾರ, ಗಿಫ್ಟ್ ಗೆ ಹಣ ಖರ್ಚು ಮಾಡಬೇಡಿ ಎಂದ ಶ್ರೀ ಹೇಳಿದ್ದಾರೆ. ನಿಮ್ಮನ್ನು ನೋಡಲು ನಾನು ಕಾತುರನಾಗಿದ್ದೇನೆ” ಎಂದಿದ್ದಾರೆ.
ಡಿಸೆಂಬರ್ 17 ನೇ ತಾರೀಖು ವಸಂತ ನಗರದಲ್ಲಿರುವ ದೇವರಾಜ್ ಅರಸ್ ಭವನದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು,ನಾಳೆ ಶ್ರೀ ಜನ್ಮೋತ್ಸವಕ್ಕೆ ಬಘೀರ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.