ಗಾಂಧಿನಗರ: ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ `ಸೂರತ್ ಡೈಮಂಡ್ ಬೋರ್ಸ್’ ಅನ್ನು ಮೋದಿ ಅವರು ಇಂದು ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ಗುಜರಾತ್ನ ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ.
ಸೂರತ್ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. 4,500ಕ್ಕೂ ಹೆಚ್ಚು ನೆಟ್ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ವಿಶ್ವದ ಅತಿ ದೊಡ್ಡ ‘ಸೂರತ್ ಡೈಮಂಡ್ ಬೋರ್ಸ್’ ಕಟ್ಟಡ ಉದ್ಘಾಟನೆ
Date: