60% ಕನ್ನಡ 40% ಬೇರೆ ಬಾಷೆ ನಾಮಫಲಕ ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು..?

Date:

ಬೆಂಗಳೂರು: ಅಂಗಡಿ, ಮಾಲ್‌ಗಳ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಲ್ಲೇ ಇರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಅಂಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಸಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಪರಮೇಶ್ವರ್, ಬಿಬಿಎಂಪಿ, ಗೃಹ ಇಲಾಖೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಬಿಜೆಪಿ ಅವಧಿಯಲ್ಲಿ 2022 ರಲ್ಲಿ ಪಾಸ್ ಆಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಸೆಕ್ಷನ್ 17(6) ರಲ್ಲಿ ನಾಮಫಲಕಗಳು ಅರ್ಧದಷ್ಟು ಕನ್ನಡ ಭಾಷೆ ಕೆಳಭಾಗದ ಅರ್ಧ ಬೇರೆ ಭಾಷೆಯಲ್ಲಿ ಇರಬೇಕು ಅಂತ ಎರಡು ಸದನದಲ್ಲಿ ಕಾಯ್ದೆ ಪಾಸ್ ಆಗಿ ರಾಜ್ಯಪಾಲರ ಅಂಕಿತ ಕೂಡಾ ಆಗಿತ್ತು.
ಆದರೆ ಅರ್ಧ ಭಾಗ ಮಾತ್ರ ಕನ್ನಡ ಇರಬೇಕು ಎಂಬ ನಿಯಮದ ಬದಲಾಗಿ,ಸಿದ್ದರಾಮಯ್ಯ ಸರ್ಕಾರ 2018 ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ 60%ಕನ್ನಡ ನಾಮ ಫಲಕ, 40% ಇತರೇ ಭಾಷೆ ಬಳಕೆ ನಿಯಮವನ್ನೇ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ತಿದ್ದುಪಡಿ ನಿಯಮಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸಿಎಂ ಸೂಚನೆ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...