ಫೇಸ್‍ಬುಕ್‍ನ ದೋಷ ಕಂಡುಹಿಡಿದ ಯುವಕನಿಗೆ ಬಹುಮಾನ ಎಷ್ಟು ಗೊತ್ತಾ..?

Date:

ಫೇಸ್ ಬುಕ್ ಕೋಡಲ್ಲಿ ದುರ್ಬಲತೆಯನ್ನು ಕಂಡುಹಿಡಿದ ಕೊಲ್ಲಂ ನಲ್ಲಿ ನೆಲೆಸಿರುವ ಒಬ್ಬ ಯುವ ಹ್ಯಾಕರ್ ಗೆ 10.70 ಲಕ್ಷ ಬಹುಮಾನ.
ಫೇಸ್ ಬುಕ್ 2011 ರಲ್ಲಿ ದೋಷ ಕಂಡುಹಿಡಿಯಿರಿ,ನಗದು ಬಹುಮಾನ ಗೆಲ್ಲಿರಿ ಎಂಬ ಕಾರ್ಯಕ್ರಮ ಶುರುಮಾಡಿದೆ , ಇದರ ಅನುಸಾರ ಫೇಸ್ ಬುಕ್ ನಲ್ಲಿ ದೋಷ ಕಂಡು ಹಿಡಿದು ಎಚ್ಚರಿಸುವ ವ್ಯಕ್ತಿಗಳಿಗೆ ನಗುದು ಬಹುಮಾನ ನೀಡಿ ಪುರಸ್ಕರಿಸಲಾಗುವುದು.
ಚತ್ತನೂರಿನ ಎಮ್.ಈ.ಎಸ್ ತಾಂತ್ರಿಕ ಕಾಲೇಜಿನ 20 ರ ಹರೆಯದ ಅರುಣ್ ಎಸ್ ಕುಮಾರ್ , ಫೇಸ್ ಬುಕ್ ವ್ಯವಹಾರಿಕ ಮ್ಯಾನೇಜರ್ ನನ್ನು ಒಬ್ಬ ಹ್ಯಾಕರ್ 10 ಸೆಕೆಂಡ್ ಗಳಲ್ಲಿ ಹಿಡಿತ ಸಾಧಿಸಬಲ್ಲ ಎಂದು ದುರ್ಬಲತೆಯನ್ನು ಬಹಿರಂಗ ಪಡಿಸಿದನು.
“ಒಬ್ಬ ಹ್ಯಾಕರ್ ಯಾವುದೇ ಫೇಸ್ ಬುಕ್ ಬಳಕೆದಾರರ ಅಕೌಂಟ್ಅನ್ನು ಸುಲಭವಾಗಿ ಬದಲಿಸಬಲ್ಲ, ಆದುದರಿಂದ ಅದರ ಮುಂದಿನ ಪರಿಣಾಮವನ್ನು ಊಹಿಸಲಾಗದು” ಎಂದು ಅರುಣ್ ಹೇಳಿದರು.
ಆಗಸ್ಟ್ 29 ರಂದು ದೋಷವನ್ನು ಫೇಸ್ ಬುಕ್ ಸೆಕ್ಯೂರಿಟಿ ತಂಡದ ಮುಂದೆ ಬಹಿರಂಗಪಡಿಸಿದನು. ಅದರಲ್ಲಿ ಒಬ್ಬ ತಂಡದ ಸದಸ್ಯ ಮಾರನೆಯ ದಿನ ಇವನಿಗೆ ಮರು ಉತ್ತರಿಸಿ ಇವನ ಆವಿಷ್ಕಾರ ಒಂದು ದೊಡ್ಡ ಭದ್ರತೆಯನ್ನು ಬೇದಿಸುವುದನ್ನು ತಪ್ಪಿಸಿದೆ ಎಂದು ಹೇಳಿದರು. ಸೆಪ್ಟೆಂಬರ್ 6 ರ ಒಳಗೆ ಈ ದೋಷವನ್ನು ಸರಿಪಡಿಸಿದ ಫೇಸ್ ಬುಕ್ ಇದಾದ ಮೂರು ದಿನಕ್ಕೆ ನಗದು ಬಹುಮಾನದ ವಿಷಯವನ್ನು ತಿಳಿಸಿ ಅರುಣ್ ಗೆ ಮೇಲ್ ಮಾಡಿದರು.
ಅರುಣ್ ಅವರಿಗೆ ದೋಷ ಪಡಿಸಿದ ಇತಿಹಾಸವಿದೆ. ಗೂಗಲ್ ಹಾಗು ಫೇಸ್ ಬುಕ್ ನಲ್ಲಿ ಹಿಂದೆಯೂ ಸಹ ದೋಷ ಕಂಡುಹಿಡಿದಿದ್ದಾರೆ. ಹಿಂದೆ ಏಪ್ರಿಲ್ ನಲ್ಲಿ ಫೇಸ್ ಬುಕ್ ಇವರಿಗೆ ಏಳು ಲಕ್ಷ ಬಹುಮಾನ ಘೋಷಿಸಿತ್ತು. ಈ ಯುವ ಟೆಕ್ಕಿ ಕಳೆದ ಮೂರು ವರ್ಷದಲ್ಲಿ 30.85 ಲಕ್ಷ ರುಪಾಯಿಯಷ್ಟು ನಗದು ಬಹುಮಾನವನ್ನು ದೋಷ ಕಂಡುಹಿಡಿಕೆಯಲ್ಲಿ ಪಡೆದಿದ್ದಾರೆ.
ಈ ಆಗಸ್ಟ್ ನಲ್ಲಿ ಫೇಸ್ ಬುಕ್ ಅರುಣ್ ಅವರನ್ನು ಬೇರೆ ರಾಷ್ಟ್ರಗಳ ಇತರ ಮೂವರ ಜೊತೆ ಆಹ್ವಾನಿಸಿ ತನ್ನ ಭದ್ರತೆಯ ತಂಡದ ಜೊತೆ ಸಭೆ ಏರ್ಪಡಿಸಿತ್ತು. ಫೇಸ್ ಬುಕ್ ವೈಟ್ ಹ್ಯಾಟ್ ಹ್ಯಾಕರ್ ಗಳ ಹಾಲ್ ಆಫ್ ಫೇಮ್ ನಲ್ಲಿ ಹತ್ತನೇ ಸ್ಥಾನ ಘೋಷಿಸಿತ್ತು. ಫೇಸ್ ಬುಕ್ ಹಾಲ್ ಆಫ್ ಫೇಮ್ ನಲ್ಲಿ ಗುರುತಿಸಿಕೊಂಡ ಏಕೈಕ ಭಾರತೀಯ ಈತ.
ಕೊಲ್ಲಂನ ಮುಂದಕ್ಕಲ್ ಊರಿನ ಈತ ಅರುಣ್ ಇನ್ನು ಒಂದು ವರ್ಷದಲ್ಲಿ ಪದವಿ ಮುಗಿಸುತ್ತಾನೆ. ಈ ಬಹುಮಾನದ ಹಣವನ್ನು ತನ್ನ ಮುಂದಿನ ವಿದ್ಯಾಬ್ಯಾಸವನ್ನು ಬೇರೆ ದೇಶದಲ್ಲಿ ಮಾಡಲು ಬಳಸಲು ಇಚ್ಚಿಸುತ್ತೇನೆ ಎಂದು ಹೇಳಿದರು. ಇವನ ತಂದೆ ಪಿ.ಎಸ್.ಸುರೇಶ ಕುಮಾರ್, ರಾಜ್ಯ ಸರ್ಕಾರದಡಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ , ತಾಯಿ ನಾಗಲಕ್ಷ್ಮಿ ಗೃಹಿಣಿಯಾಗಿದ್ದಾರೆ.

  • ಸುಪ್ರೀತ್ ವಸಿಷ್ಟ

Like us on Facebook  The New India Times

POPULAR  STORIES :

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...