ಬೆಂಗಳೂರು: ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಪೊಲೀಸರು ಬಂದು ಹೋದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅನಂತ್ ಕುಮಾರ್ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ರತ್ನಗಂಬಳಿ ಹಾಕಿದ್ದಾರೆ. ಠಾಣೆಗೆ ಬರಲು ವಾರೆಂಟ್ ತಗೊಂಡು ಬನ್ನಿ ಎಂದಿದ್ದೇನೆ. ಈಗ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ.
ನಾನು ದೇಶದಲ್ಲಿ ಓಡಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಪರಿಸ್ಥಿತಿಯೇ ಈ ರೀತಿಯಾದ್ರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ನಾನು ಮಂಪರು ಪರೀಕ್ಷೆಗೂ ರೆಡಿ. ನಾನು ಅಯೋಧ್ಯೆಗೆ ಹೋಗುವವರಿಗೆ ರಕ್ಷಣೆ ವಿಚಾರವಾಗಿ ಮಾತನಾಡಿರೋದು. ಹೀಗಾಗಿ ನಾನು ಅಪರಾಧಿ ಅಲ್ಲ ಎಂದು ಹರಿಪ್ರಸಾದ್ ಅವರು ಪುನರುಚ್ಛರಿಸಿದರು.
ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ!
Date: