ಅಯೋಧ್ಯೆ: 500 ವರ್ಷಗಳ ಕನಸು. ದಶಮಾನಗಳ ಹೋರಾಟಕ್ಕೆ ಇಂದು ಸಂಪೂರ್ಣ ಫಲ ಸಿಕ್ಕಿದೆ.
ದೇಶದಲ್ಲಿ ಅಗಣಿತ ಭಕ್ತರು ಇದುವರೆಗೂ ಕಾತರದಿಂದ ಎದುರು ನೋಡುತ್ತಿದ್ದ ಆ ಕ್ಷಣ ನಡೆದೆಬಿಟ್ಟಿದೆ. ಹೌದು, ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾದ ವಿಧಿ-ವಿಧಾನಗಳು ನೇರವೇರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಐತಿಹಾಸಿಕ ಸಮಾರಂಭ ನಡೆದಿದ್ದು, ದೇಶದ ಸಾಕಷ್ಟು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಇಂದು ಅಯೋಧ್ಯೆಯ ರಾಮನ ಪ್ರಾಣ ಪ್ರತಿಷ್ಟಾಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಾಲ್ಗೊಂಡಿದ್ದು ಅವರ ಸಮ್ಮುಖದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಿತು. ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಯೋಗಿ ಆದಿತ್ಯನಾಥ್ ಸಹ ಪ್ರಾಣ ಪ್ರತಿಷ್ಠಾದಲ್ಲಿ ಭಾಗಿಯಾಗಿದ್ದಾರೆ. ಗರ್ಭಗುಡಿಯಲ್ಲಿ ನೆಲೆ ನಿಂತಿರುವ ಬಾಲರಾಮ ಹೂವಿನ ಹಾರ ಮತ್ತು ಒಡವೆಗಳಿಂದ ಕಂಗೊಳಿಸುತ್ತಿದ್ದು, ನೋಡುಗರ ಹೃದಯ ತುಂಬಿ ಬರುವಂತೆ ದರ್ಶನ ನೀಡಿದ.