ಕೇಂದ್ರ ಬಜೆಟ್‌ʼನಲ್ಲಿ ರಾಜ್ಯಕ್ಕೆ ಬರಪರಿಹಾರ ಘೋಷಣೆ ನಿರೀಕ್ಷೆ

Date:

ಬೆಂಗಳೂರು: ಇಂದಿನಿಂದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಸಲದ ಬಜೆಟ್ ಕೇವಲ ವೋಟ್ ಆನ್ ಅಕೌಂಟ್ ಆಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಹೊಸ ಸರ್ಕಾರ ರಚನೆ ಮಾಡಿ,
ಜೂನ್ ನಲ್ಲಿ ಹೊಸ ಹಣಕಾಸು ವರ್ಷ (2024-25)ಕ್ಕೆ ಬೇಕಾದ ಪೂರ್ಣ ಬಜೆಟ್ ಮಂಡಿಸಲಿದೆ. ವೋಟ್ ಆನ್ ಅಕೌಂಟ್‌ನಲ್ಲಿ ಅಥವಾ ಮಧ್ಯಂತರ ಬಜೆಟ್‌ನಲ್ಲಿ ಜೂನ್ ಕೊನೆ ತನಕ ಸರ್ಕಾರದ ಖರ್ಚುವೆಚ್ಚ ನಿಭಾಯಿಸುವುದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳನ್ನು ಮಾಡಿಕೊಡಲಾಗುತ್ತದೆ.
ಬಜೆಟ್‌ನಿಂದ ರಾಜ್ಯದ ಜನರ ನಿರೀಕ್ಷೆಗಳೇನು?
• ಬರೀ ಘೋಷಣೆಗೆ ಮಾತ್ರ ಸೀಮಿತವಾಗಿರುವ ಗದಗ-ಯಲವಗಿ ರೈಲು ಮಾರ್ಗ ಅನುಷ್ಟಾನ ಗೊಳಿಸಲು ಅಗತ್ಯ ಅನುದಾನ.
• ಹೊಸ ರೈಲ್ವೆ ಮಾರ್ಗ, ರಾಜ್ಯ ರೈಲ್ವೆ ಡಬ್ಲಿಂಗ್, ಹೊಸ ಮಾರ್ಗ ಘೋಷಣೆ
• ಪೆಟ್ರೋಲ್‌-ಡೀಸೆಲ್‌, ಸಿಲಿಂಡರ್‌ ದರ ಇಳಿಕೆ ಮಾಡಬೇಕು.
• ಕಳೆದ ವರ್ಷ ಬಜೆಟ್‌ನಲ್ಲಿಘೋಷಿಸಿರುವ ಬೇಡ್ತಿ-ವರದಾ ನದಿ ಜೋಡಣೆ ಜಾರಿಗೊಳಿಸಲು ಅಗತ್ಯ ಅನುದಾನ.
• ಕೃಷಿಕರ ಸಾಲ ಸೌಲಭ್ಯಕ್ಕೆ ಸಿಬಿಲ್‌ ವಿನಾಯಿತಿ.
• ಎಂ.ಎಸ್‌.ಪಿ.ಗೆ ಕಾನೂನಾತ್ಮಕ ರೂಪ ಜಾರಿ.
• ಉಚಿತ ಗೊಬ್ಬರ ಪೂರೈಕೆಗೆ ದೃಢ ನಿರ್ಧಾರ ಕೈಗೊಳ್ಳಬೇಕು.
• ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ, ಸೂಕ್ತ ದರ ನಿಗದಿಸುವ ಸಾಧ್ಯತೆ ಕಬ್ಬಿನ ದರ ಟನ್‌ಗೆ 4000 ರೂಪಾಯಿ ಘೋಷಣೆ ನಿರೀಕ್ಷೆ
• ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು
• ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ10 ಲಕ್ಷ ರೂ. ಸಾಲ ಸೌಲಭ್ಯ.
• ಕೃಷಿ ಉತ್ಪನ್ನಗಳನ್ನು ಜಿ.ಎಸ್‌.ಟಿ. ಯಿಂದ ಹೊರಗಿಡಬೇಕು.
• ಹಾವೇರಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಬೇಕು.
• ಅಪಘಾತ, ಕಳ್ಳತನ ಸೇರಿದಂತೆ ಅನೈತಿಕ ಚಟುವಟಿಕೆ ಹತ್ತಿಕ್ಕಲು ರೈಲ್ವೆ ಪೊಲೀಸ್‌ ಠಾಣೆ
• ಬರಗಾಲ ಹಿನ್ನೆಲೆಯಲ್ಲಿಎನ್‌ಡಿಆರ್‌ಎಫ್‌ ಪರಿಹಾರ ಬಿಡುಗಡೆ ಮಾಡಬೇಕು.
• ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...