ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಕಡೆಗೆ ಕೆಲಸ ಮಾಡುವುದು ನಮ್ಮ ಗುರಿ. ನಮ್ಮ ಪ್ರಯತ್ನಗಳು ಸಮಾಜದ ಪ್ರತಿಯೊಂದು ವಿಭಾಗವನ್ನೂ ಒಳಗೊಳ್ಳುವ ಸಮಗ್ರ ಪ್ರಗತಿಯತ್ತ ನಿರ್ದೇಶಿಸಲ್ಪಟ್ಟಿವೆ ಎಂದು ನಿರ್ಮಲಾ ಹೇಳಿದರು. ಇನ್ನೂ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೂಡ ಹೇಳಿದ್ದಾರೆ. 2024-25ನೇ ಸಾಲಿನ ಮಧ್ಯಂತರ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಸರ್ಕಾರ ಮುಂದಾಗಿದೆ.
ಮಧ್ಯಂತರ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳು ಕಳೆದ ಹಣಕಾಸು ವರ್ಷದ್ದೇ ಆಗಿರುವುದರಿಂದ ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಇಲ್ಲ. ಆದರೆ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರ ತಂದಿದೆ. ಹಾಲಿ ಸ್ಲ್ಯಾಬ್ ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ನಿರ್ಮಲಾ ಹೇಳಿದರು.
ಆದಾಯ ತೆರಿಗೆ ಸ್ಲ್ಯಾಬ್ʼನಲ್ಲಿ ಯಾವುದೇ ಬದಲಾವಣೆ ಇಲ್ಲ: ವಿತ್ತ ಸಚಿವೆ
Date: