ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಆ ಕ್ಲಿಪಿಂಗ್ ಸೆಕ್ಯುರ್ ಮಾಡುತ್ತಿದ್ದೇವೆ. ಅಧಿಕೃತವಾಗಿ ಟೆಲಿಕಾಸ್ಟ್ ಆಗಿರೋ ಕ್ಲಿಪಿಂಗ್ ಪಡೆದು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದರು.
ಈಗಾಗಲೇ ಸುಮೋಟೋ ಕೇಸ್ ದಾಖಲಾಗಿದೆ. ಬಿಜೆಪಿ ಕೊಟ್ಟಿರುವ ದೂರನ್ನ ಅದಕ್ಕೆ ಸೇರಿಸಿದ್ದೇವೆ. ಮೊದಲು ಟೆಲಿಕಾಸ್ಟ್ ಮಾಡಿದವರ ವಿಡಿಯೋ ಪಡೆದು ತನಿಖೆ ಮಾಡ್ತೇವೆ. ಎಫ್‌ಎಸ್‌ಎಲ್‌ಗೆ ಕಳುಹಿಸುವ ಪ್ರಕಿಯೆಗಳು ಆರಂಭವಾಗಿವೆ. ಘೋಷಣೆ ಕೂಗಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ವೀಡಿಯೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮೆರಾ ಎಲ್ಲವನ್ನೂ ಪಡೆದು ತನಿಖೆ ಮಾಡ್ತೇವೆ. ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ಇದರ ಸತ್ಯತೆ ವೈಜ್ಞಾನಿಕವಾಗಿ ತಿಳಿಯಬೇಕು ಅಂತ ಎಫ್ಎಸ್‌ಎಲ್‌ಗೆ ಕಳುಹಿಸುತ್ತಿದ್ದೇವೆ. ಒಂದು ವೇಳೆ ಕೂಗಿದ್ರೆ ಕಾನೂನು ಕ್ರಮ ಆಗೇ ಆಗುತ್ತೆ ಎಂದು ಒತ್ತಿ ಹೇಳಿದರು.
ಪಾಕ್ ಪರ ಘೋಷಣೆ ಕೂಗಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ !
Date: