ಉಡುಪಿ: ಚುನಾವಣೆಯ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಈಶ್ವರಪ್ಪ, ಯಡಿಯೂರಪ್ಪ ಕುಟುಂಬ ಶಿವಮೊಗ್ಗದ ಕಾರ್ಯಕರ್ತರಿಗೆ ನಗರಸಭಾ ಚುನಾವಣೆಗೆ ಟಿಕೆಟ್ ನೀಡುವ ಸುಳ್ಳು ಹೇಳಿ ಅವರನ್ನು ತನ್ಮಿಂದ ದೂರ ಮಾಡುತ್ತಿದ್ದಾರೆ, ಆ ಕುಟುಂಬ ಮಾಡುತ್ತಿರುವ ಮೋಸವನ್ನು ವಿವರಿಸಿದ ಬಳಿಕ ಕಾರ್ಯಕರ್ತರಿಗೆ ಜ್ಞಾನೋದಯವಾಗುತ್ತಿದೆ ಎಂದು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಿತ್ತು ಈ ಬಾರಿ ಎಷ್ಟು ಗೆಲ್ಲುತ್ತೇವೆಯೋ ಗೊತ್ತಿಲ್ಲ, ಆದರೆ ಒಂದು ಮಾತು ಸತ್ಯ, ಚುನಾವಣೆಯ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾರೆ, ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಸೋಲುತ್ತಾರೆ ಮತ್ತು ರಾಜ್ಯ ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಿ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಾಪಸ್ಸು ಬರುತ್ತದೆ ಎಂದು ಈಶ್ವರಪ್ಪ ಹೇಳಿದರು.
ಚುನಾವಣೆಯ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾರೆ !
Date:






