ಮೈಸೂರು: ಕರುನಾಡಲ್ಲಿ ಲೊಕಸಭಾ ಕುರುಕ್ಷೇತ್ರದ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಪಾಳಯ ರಣತಂತ್ರಗಳನ್ನ ಹಣೆಯಲು ಮುಂದಾಗಿದೆ. ಇನ್ನೂ ಬಿಜೆಪಿ ನಾಯಕರು ಅರಮನೆಗೆ ಬಿ ಫಾರಂ ತಂದು ಅಭ್ಯರ್ಥಿ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ನೀಡಿದ್ದಾರೆ. ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ರಾಮದಾಸ್, ಪ್ರೀತಂ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ ಅವರು ಯದುವೀರ್ ಒಡೆಯರ್‌ಗೆ ಬಿ ಫಾರಂ ನೀಡಿದರು. ತಾಯಿ ಪ್ರಮೋದಾ ದೇವಿ ಒಡೆಯರ್ ಮುಂದೆಯೇ ಯದುವೀರ್ ಬಿ ಫಾರಂ ಪಡೆದರು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಏ.3 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಮೈಸೂರು ಅರಮನೆಗೆ ತೆರಳಿ ಬಿ-ಫಾರಂ ಕೊಟ್ಟ ಬಿಜೆಪಿ ನಾಯಕರು
Date: