ಕೋಟಿ ಕೋಟಿ ಎಣಿಸೋ ಸ್ಟಾರ್‍ಗಳ ಮೊದಲ ಸಂಭಾವನೆ ಎಷ್ಟು ಗೊತ್ತಾ.?!

Date:

ಕೋಟ್ಯಾಧಿಪತಿಗಳಾಗಿ ಹುಟ್ಟೋ ಯೋಗ ಎಲ್ಲರಿಗೂ ಸಿಕ್ಕೋದಿಲ್ಲ.. ಆದ್ರೆ, ಹುಟ್ಟಿದ ನಂತರ ಶ್ರೀಮಂತ ವ್ಯಕ್ತಿಯಾಗಿ ಬೆಳೆಯೋದು ಮಾತ್ರ ನಮ್ಮ ನಮ್ಮ ಕೈಲಿರುತ್ತೆ .. ಸದ್ಯಕ್ಕೆ ಈಗ ಕೋಟ್ಯಾಧಿಪತಿಗಳಾಗಿರೋ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಟೈಮ್‍ನಲ್ಲಿ ಒಂದಂಕ್ಕಿ ಎರಡಂಕ್ಕಿ ಸಂಬಳವನ್ನ ಪಡೆದಿದ್ದಾರೆ.. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ಸ್ಟಾರ್‍ಗಳಾಗಿ ಬೆಳೆದ ಸೋ ಕಾಲ್ಡ್ ನಮ್ಮ ಸಿನಿಮಾ ಸೆಲಬ್ರೆಟಿಗಳ ಮೊದಲ ಸಂಬಳ ಎಷ್ಟು ಗೊತ್ತಾ..? ಆ ಬಗ್ಗೆ ಒಂದು ವಿವರಣೆ ಇಲ್ಲಿದೆ ನೋಡಿ..
ಶಾರುಖ್ ಖಾನ್..

shah-rukh-khan
ಶಾರುಖ್ ಖಾನ್ ಬಾಲಿವುಡ್‍ನ ಬಾದ್‍ಷಾ-ಕಿಂಗ್‍ಖಾನ್ ಅಂತ ಕರೆಸಿಕೊಳ್ಳೋದಕ್ಕೆ ಈತನ ಪರಿಶ್ರಮವೆ ಕಾರಣ.. ಈತ ಮೊದಲು ಪಡೆದ ಸಂಭಾವನೆ ಎಷ್ಟು ಗೊತ್ತ..? ಕೌಂಟರ್‍ನಲ್ಲಿ ಟಿಕೆಟ್ ಮಾರಿ, ದ್ವಾರಧಿಕಾರಿಯಾಗಿ 50ರೂಪಾಯಿಯನ್ನ ಪಡಿತಿದ್ದ ಕಾಲವೊಂದಿತ್ತು.. ಆದ್ರೀಗ ಈ ನಟನ ಬರೊಬ್ಬರಿ ಆಸ್ತಿ ಕೇವಲ 3752 ಕೋಟಿಗಳಷ್ಟೆ.. ತನ್ನ ಒಂದು ಸಿನಿಮಾಗೆ ಈತ ಪಡೆಯೋ ಸಂಭಾವನೆ 55 ರಿಂದ 60 ಕೋಟಿ ಅಂತ ಅಂದಾಜಿದೆ..
=-=-=-
ರಜನಿಕಾಂತ್

bloombergquint%2f2016-07%2fdf31e5cb-fc54-4d19-863c-97ebd29b8d64%2frajni
ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್‍ಸ್ಟಾರ್ ಆಗಿ ಮೆರಿತಿರೋ ರಜನಿಕಾಂತ್ ಅವರ ಬಗ್ಗೆ ನಿಮಗೆ ಹೆಚ್ಚಾಗಿ ಹೇಳಬೇಕಿಲ್ಲ.. ಕರ್ನಾಟಕದಲ್ಲಿರೋ ಪ್ರತಿಯೊಬ್ಬರಿಗು ಗೊತ್ತು, ಸಿನಿಮಾಗೆ ಬರೋ ಮೊದಲು ಇಲ್ಲೇ ಕಂಡಕ್ಟರ್ ಆಗಿದವ್ರು ಅಂತ.. ಇದಕ್ಕೂ ಮೊದಲು ಮರಗೆಲಸವನ್ನ ಮಾಡುತ್ತಿದ ಸಂದರ್ಭದಲ್ಲಿ 10 ರೂಪಾಯಿ ಸಂಬಳವನ್ನ ಪಡಿತಿದ್ರಂತೆ.. ಆದ್ರೀಗ ಈ ಸೂಪರ್‍ಸ್ಟಾರ್ ಒಂದು ಚಿತ್ರದಲ್ಲಿ ನಟಿಸ್ತಾರೆ ಅಂದ್ರೆ ಅಂದಾಜು 35 ರಿಂದ 45 ಕೋಟಿ ಕೊಡಬೇಕು..
=-=-=-
ರಾಖಿ ಸಾವಂತ್

rakhi-sawant-600x450
ಬಾಲಿವುಡ್‍ನಲ್ಲಿ ಗಾಸಿಪ್‍ಗಳ ಮೂಲಕ ಹೆಚ್ಚು ಸೌಂಡ್ ಮಾಡ್ತಿರೋ ಈ ನಟಿ ಒಂದು ಕಾಲದಲ್ಲಿ 30ರೂ ಸಂಬಳವನ್ನ ಪಡಿತಿದ್ಲು ಅಂದ್ರೆ ನೀವ್ ನಂಬ್ಲೇಬೇಕು.. ತನ್ನ 11 ವಯಸ್ಸಿನಲ್ಲಿ ಹೋಟೆಲ್‍ನಲ್ಲಿ ಕೆಲಸ ಮಾಡೋ ಟೈಮ್‍ನಲ್ಲಿ ಈಕೆಗೆ ಸಿಗುತ್ತಿದ್ದ ಸಂಬಳವಿಷ್ಟು.. ಸದ್ಯಕ್ಕೆ ಈಕೆ ತನ್ನ ಆಸ್ತಿಯ ವಿವರವನ್ನ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೇಳಿಕೊಂಡಿರುವಂತೆ 15 ಕೋಟಿಯನ್ನ ತಲುಪಿದೆ..
=-=-=-
ಅಕ್ಷಯ್‍ಕುಮಾರ್

akshay-kumar-1-600x340
ಬಾಲಿವುಡ್‍ನ ಕಿಲಾಡಿ ಅಂತಾ ಖ್ಯಾತಿ ಪಡೆದಿರೋ ಆಕ್ಷಯ್‍ಕುಮಾರ್ ಒಂದು ಟೈಮ್‍ನಲ್ಲಿ ಮಾಣಿ ಹಾಗೆ ಚೆಫ್ ಆಗಿ ಬ್ಯಾಂಕಾಕ್‍ನಲ್ಲಿ ಕೆಲಸ ಮಾಡಿದವರು.. ಈತನ ಮೊದಲ ಸಂಬಳ ಕೇವಲ 1500ರೂಪಾಯಿಗಳು.. ಆನಂತರ ಮತ್ತೆ ಭಾರತಕ್ಕೆ ಹಿಂದಿರುಗಿ ತನ್ನ ಹಾರ್ಡ್‍ವರ್ಕ್ ಮೂಲಕ ಬಾಲಿವುಡ್‍ನಲ್ಲಿ ನೆಲೆನಿಂತ ಈತ 900 ಕೋಟಿಗಳ ಒಡೆಯನಾಗಿ ಬೆಳೆದಿದ್ದಾರೆ..
=-=-
ಬೊಮ್ಮನ್ ಹಿರಾನಿ

ab2_boman-irani-600x364
ಬಾಲಿವುಡ್‍ನಲ್ಲಿ ಮೋಸ್ಟ್ ಟ್ಯಾಲೆಂಡ್ ನಟರ ಪೈಕಿ ಈ ನಟ ಕೂಡ ಒಬ್ಬ.. ತನ್ನ ಬಾಲ್ಯದಲ್ಲಿ ಹೋಟೆಲ್‍ನಲ್ಲಿ ಮಾಣಿಯಾಗಿ ರೂಮ್ ಸರ್ವೀಸ್ ಮಾಡಿಕೊಂಡಿದ್ದ ಈತನಿಗೆ ಟಿಪ್ಸ್‍ನ ರೀತಿ ಸಿಗುತ್ತಿದದ್ದು 5 ರೂಪಾಯಿಗಳು.. ಆನಂತರ ತನ್ನ ಪರಿಶ್ರಮದಿಂದ ಬಾಲಿವುಡ್‍ನಲ್ಲಿ ಬೆಳೆದ ಈ ನಟ,
ಬಿ-ಟೌನಲ್ಲಿ 2014ರಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟರ ಪೈಕಿ ಟಾಪ್ 10ರಲ್ಲಿ ಕಾಣಿಸಿಕೊಂಡಿದ್ರು.. ಸದ್ಯಕ್ಕೆ ಈತನ ಅಂದಾಜು ಆಸ್ತಿ 450 ಕೋಟಿ..
=-=-=-=-
ನವಾಜ್ಜುದೀನ್ ಸಿದ್ಧಿಕಿ

nawazuddin-sidiquie-600x339
ವಾಚ್‍ಮನ್ ಆಗಿ 300ರೂಗಳನ್ನ ತನ್ನ ಸಂಬಳವಾಗಿ ಪಡಿತಿದ್ದ ಈತ ಸದ್ಯಕ್ಕೆ ಬಾಲಿವುಡ್‍ನಲ್ಲಿರೋ ಬಹು ಬೇಡಿಕೆ ಆಕ್ಟರ್.. ಸದ್ಯಕ್ಕೆ ಈತನ ಆಸ್ತಿ ಎಷ್ಟಿದೆ ಗೊತ್ತ..? 120ಕೋಟಿಗೂ ಅಧಿಕ..ಸದ್ಯಕ್ಕಿರೋ ಬಿ-ಟೌನ್‍ನ ಮಾಹಿತಿಯ ಪ್ರಕಾರ ಒಂದು ಚಿತ್ರಕ್ಕೆ ಒಂದು ಕೋಟಿಯನ್ನ ಚಾರ್ಚ್ ಮಾಡ್ತಾರಂತೆ ಸಿದ್ದಿಕ್..
=-=-=–=
ಜಾಕಿ ಶ್ರಾಫ್

jackie-shroff
ಬಾಲಿವುಡ್‍ನ ಬಿಂದಾಸ್ ನಟ ಜಾಕಿ ಶ್ರಾಫ್ ತನ್ನ 14 ವಯಸ್ಸಿನಲ್ಲಿ ಪೋಸ್ಟರ್‍ಗಳ ಅಂಟಿಸೋದು ಹಾಗೆ ಕಡಲೆ ಬೀಜ ಮಾರೋ ಕಾಯಕವನ್ನ ಮಾಡ್ತಿದ್ದವರು.. ಆಗ ಇವರಿಗೆ ಸಿಕ್ಕಿದ್ದ ಸಂಭಾವನೆ 60 ರೂಪಾಯಿಯಂತೆ.. ಸದ್ಯಕ್ಕೆ ಇವ್ರ ಅಂದಾಜು ಆಸ್ತಿ 175 ಕೋಟಿ ರೂಗಳು..
=-=-=-

  • ಅಶೋಕ್ ರಾಜ್

Like us on Facebook  The New India Times

POPULAR  STORIES :

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...