ಬೆಂಗಳೂರು: ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಾಗಶೆಟ್ಟಳ್ಳಿಯಲ್ಲಿ ತಡರಾತ್ರಿ ಜರುಗಿದೆ. ಸ್ನೇಹಿತನನ್ನೆ ರೌಡಿಶೀಟರ್ ಕೊಲೆ ಮಾಡಿದ್ದಾನೆ. ಮೂರ್ತಿ (45) ಕೊಲೆಯಾದ ಆಟೋ ಡ್ರೈವರ್. ಮೂರ್ತಿಗೆ ರೌಡಿಶೀಟರ್ ಶರಣಪ್ಪ ಎಂಬಾತ ಕೆಲ ವರ್ಷಗಳಿಂದ ಪರಿಚಯವಾಗಿದ್ದ.
ನಿನ್ನೆ ಇಬ್ಬರೂ ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಡ್ರ್ಯಾಗರ್ ನಿಂದ ಹಲವುಬಾರಿ ಇರಿದಿದ್ದಾನೆ. ತೀವ್ರ ರಕ್ರಸ್ರಾವವಾಗಿ ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಆರೋಪಿಗಾಗಿ ಸಂಜಯ್ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ.!
Date:






