ಬೆಂಗಳೂರಲ್ಲಿ‌ ನಟೋರಿಯಸ್ ಕೊಲೆಗಾರನ ಬಂಧನ

Date:

ಬೆಂಗಳೂರು: ನಗರದ ಬನಶಂಕರಿ ಪೊಲೀಸರು ಕಾರ್ಯಚರಣೆ ನಡೆಸಿ ನಟೋರಿಯಸ್ ಕೊಲೆಗಾರನನ್ನು ಅರೆಸ್ಟ್ ಮಾಡಿದ್ದಾರೆ. ಬನಶಂಕರಿಯ ಗಿರೀಶ್ ಬಂಧಿತ‌ ಆರೋಪಿ.
ಆರೋಪಿಯು ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದ. ಈ ಕೊಲೆಗಾರನ ಕೃತ್ಯ ಕೇಳಿದರೆ ಗಾಬರಿ ಆಗೋದು ಗ್ಯಾರಂಟಿ. ಈತ ಕುಡಿದು ಬರ್ತಾನೆ, ಬೀದಿ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸುತ್ತಾನೆ. ಅಲ್ಲಿಂದ ಪರಾರಿಯಾಗ್ತಾನೆ! ಒಂದೇ ವಾರದಲ್ಲಿ ಆರೋಪಿ ಗಿರೀಶ್ ಎರಡು ಕೊಲೆ ಮಾಡಿದ್ದಾನೆ.


ಮೇ.12 ರಂದು ಜಯನಗರ 7ನೇ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು. ಶವ ನೋಡಿದಾಗ ಯಾರೋ ಎಳೆದು ತಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದಂತೆ ಕಂಡಿತ್ತು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಮೇ.18 ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್‌ನಲ್ಲಿ ಇದೇ ರೀತಿಯೇ ಮತ್ತೊಂದು ಕೊಲೆ ಆಗಿತ್ತು. ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಈ ಘಟನೆ ಸಂಬಂಧ ಕೊಲೆ ಪ್ರಕರಣವನ್ನು ಮಾರ್ಕೆಟ್ ಪೊಲೀಸರು ದಾಖಲಿಸಿಕೊಂಡಿದ್ದರು. ಈ ರೀತಿ ಎರಡು ಪ್ರಕರಣ ಆದ ಬೆನ್ನಲ್ಲೇ ಬನಶಂಕರಿ ಹಾಗೂ ಕೆ.ಆರ್.ಮಾರ್ಕೆಟ್ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಯ ಹುಡುಕಾಟ ನಡೆಸಿದ್ದರು. ಈಗ ಸೈಕೋ ಕಿಲ್ಲರ್‌ನಂತೆ ವರ್ತನೆ ಮಾಡಿದ್ದ ಆರೋಪಿ ಗಿರೀಶ್‌ ಅರೆಸ್ಟ್‌ ಆಗಿದ್ದಾನೆ. ಆರೋಪಿ ಕುಡಿದು ಬಂದು , ಬೀದಿ ಬದಿ ಮಲಗಿದ್ದವರ ತಲೆಮೇಲೆ ಕಲ್ಲೆಸೆದು ಸಾಯಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಲಂಕಾ ನೆಲದಲ್ಲಿ ಕ್ರಿಕೇಟ್ ಕ”ಲಾ”ರವ !

ಲಂಕಾ ನೆಲದಲ್ಲಿ ಕ್ರಿಕೇಟ್ ಕ"ಲಾ"ರವ ! "ಲಾಯರ್" ಗಳ ಬಗ್ಗೆ ನಿಮಗೆಲ್ಲ ಗೊತ್ತೆ...

ಮೆಟ್ರೋ ಮೂರನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್: ಡಿ.ಕೆ. ಶಿವಕುಮಾರ್

ಮೆಟ್ರೋ ಮೂರನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್:...

ಸರ್ಫೆಸಿ ಕಾಯ್ದೆಗೆ ಪರಿಹಾರ; ದಿಲ್ಲಿಗೆ ನಿಯೋಗ ಬನ್ನಿ: ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಸರ್ಫೆಸಿ ಕಾಯ್ದೆಗೆ ಪರಿಹಾರ; ದಿಲ್ಲಿಗೆ ನಿಯೋಗ ಬನ್ನಿ: ಹೆಚ್.ಡಿ. ಕುಮಾರಸ್ವಾಮಿ ಸಲಹೆ ಚಿಕ್ಕಮಗಳೂರು:...

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ ದರ?

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ...