ಚಿಕ್ಕಬಳ್ಳಾಪುರ: ಪ್ರಜ್ವಲ್ ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ಇವತ್ತು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾನು ರಾಜ್ಯಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್.ಡಿ ದೇವೇಗೌಡ ಹಾಗೂ ನಾನು ಎಲ್ಲೆ ಇದ್ದರೂ ಬಂದು ಎಸ್‌ಐಟಿ ಮುಂದೆ ಹಾಜರಾಗುವ ಮೂಲಕ ತನಿಖೆಗೆ ಸಹಕಾರ ಕೊಡುವಂತೆ ಕೇಳಿಕೊಂಡಿದ್ದೆವು.
ಈ ಬಗ್ಗೆ ದೇವೇಗೌಡರು ಎಚ್ಚರಿಕೆ ಕೊಟ್ಟರೆ ನಾನು ಮನವಿ ಮಾಡಿಕೊಂಡಿದ್ದೆ. ಅಲ್ಲದೇ ಇದೇ ವೇಳೆ ಕಾರ್ಯಕರ್ತರ ಮೇಲೆ ನಂಬಿಕೆ ಇದ್ದರೆ ಕೂಡಲೇ ಬರಬೇಕು ಎಂದು ಹೇಳಿದ್ದೆವು. ಇದೀಗ ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ಇವತ್ತು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಏನು ಪ್ರಕ್ರಿಯೆಗಳು ನಡೆಯಬೇಕೋ ನಡೆಯುತ್ತೆ ಎಂದು ಹೆಚ್‌ಡಿಕೆ ತಿಳಿಸಿದರು. ಇದೇ ವೇಳೆ ಷಡ್ಯಂತ್ರ ಬಗ್ಗೆ ಕೇಳಿದಾಗ, ಇವೆಲ್ಲವೂ ಮುಂದೆ ತನಿಖೆ ನಡೆಯಲಿದ್ದು, ಸತ್ಯ ಹೊರಗೆ ಬರುತ್ತೆ ಎಂದು ಹೆಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಯಾರ ಯಾರ ಪಾತ್ರ ಏನಿದೆ?. ಈ ಎಲ್ಲದರ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿದ್ದು, ನೋಡೋಣ ಎಲ್ಲಿಗೆ ತಂದು ನಿಲ್ಲಿಸುತ್ತಾರೆ ಎಂದು ಹೇಳಿದರು.
ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ಸ್ವಲ್ಪ ಸಮಾಧಾನ !
Date:






