ಬಾದಾಮಿ ಬೀಜಗಳ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಮಹಿಳೆಯರಿಗೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಅದರಿಂದ ಸೌಂದರ್ಯ ಕೂಡ ಹಾಳಾಗುತ್ತದೆ ಎಂದು ಹೇಳುತ್ತಾರೆ. ಮಹಿಳೆಯರು ಎಲ್ಲಾ ಆಯಾಮಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ದೂರ ಮಾಡಿಕೊಳ್ಳಲು ಬಾದಾಮಿ ಬೀಜಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಬಾದಾಮಿ ಬೀಜಗಳ ಸೇವನೆಯಿಂದ ಈ ಕೆಳಗಿನ ಆರೋಗ್ಯ ಲಾಭಗಳು ಸಿಗುತ್ತವೆ.
ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಕೂಡ ಹೇರಳವಾಗಿದೆ. ಜೊತೆಗೆ ಮೆಗ್ನೀಷಿಯಮ್ ಎಂಬ ಖನಿಜಾಂಶ ಕೂಡ ಇರುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಕಾರ್ಟಿಸಲ್ ಎಂಬ ಒತ್ತಡದ ಹಾರ್ಮೋನ್ ಅನ್ನು ನಿಯಂತ್ರಣ ಮಾಡುತ್ತದೆ ಮತ್ತು ನಿದ್ರೆಯನ್ನು ಬೆಂಬಲಿಸುತ್ತದೆ.
ಬಾದಾಮಿ ಬೀಜಗಳಲ್ಲಿ ವಿಟಮಿನ್ ಇ ಪ್ರಮಾಣ ಹೆಚ್ಚಾಗಿರುವುದರಿಂದ ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತದೆ ಮತ್ತು ಋತು ಬಂಧದ ರೋಗಲಕ್ಷಣಗಳನ್ನು ದೂರ ಮಾಡುತ್ತದೆ.
ಬಾದಾಮಿ ಬೀಜಗಳಲ್ಲಿ ಪ್ರೋಟೀನ್ ಕೂಡ ಹೆಚ್ಚಾಗಿ ಸಿಗುವುದರಿಂದ ರಕ್ತದ ಶುಗರ್ ಲೆವೆಲ್ ಅನ್ನು ಸರಾಗವಾಗಿ ನಿರ್ವಹಿಸುತ್ತದೆ. ಮಹಿಳೆಯರು ಬಾದಾಮಿ ಬೀಜಗಳನ್ನು ಸ್ನಾಕ್ಸ್ ತರಹ ಸೇವಿಸಬಹುದು ಅಥವಾ ಆಲ್ಮಂಡ್ ಬಟರ್ ಟೋಸ್ಟ್ ರೂಪದಲ್ಲಿ ಕೂಡ ಸವಿಯಬಹುದು.
ವಯಸ್ಸಾದಂತೆ ಮಹಿಳೆಯರಿಗೆ ಮೂಳೆಗಳು ಸವೆಯುತ್ತವೆ ಅಥವಾ ದುರ್ಬಲವಾಗುತ್ತಾ ಹೋಗುತ್ತವೆ ಎಂದು ಹೇಳುತ್ತಾರೆ. ಆಸ್ತಿಯೋಪೋರೋಸಿಸ್ ಸಮಸ್ಯೆಯಿಂದ ಸಾಕಷ್ಟು ಮಹಿಳೆಯರು ಬಳಲುತ್ತಾರೆ.
ಬಾದಾಮಿ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಫಾಸ್ಫರಸ್ ಸಿಗುತ್ತದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಬಲಪಡಿಸುವಲ್ಲಿ ನೆರವಾದರೆ ಮೆಗ್ನೀಷಿಯಂ ನಾವು ಸೇವಿಸುವ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಮೂಳೆಗಳ ಬಲವರ್ಧನೆಗೆ ಬಳಸಿಕೊಳ್ಳುವಂತೆ ಸಹಾಯ ಮಾಡುತ್ತದೆ.
ಅದೇ ರೀತಿ ಫಾಸ್ಫರಸ್ ನಮ್ಮ ಮೂಳೆಗಳನ್ನು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ. ಮಹಿಳೆಯರು ತಮ್ಮ ಆಹಾರ ಪದ್ಧತಿಯಲ್ಲಿ ಬಾದಾಮಿ ಬೀಜಗಳನ್ನು ಸೇರಿಸಿ ಸೇವಿಸುವುದರಿಂದ ಮೂಳೆಗಳಿಗೆ ಸಂಬಂಧಪಟ್ಟಂತೆ ಎದುರಾಗುವ ಯಾವುದೇ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು.
ಬಾದಾಮಿ ಬೀಜಗಳು ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ನೆರವಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶ ಇರುವಂತಹ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಳ್ಳುತ್ತದೆ ಮತ್ತು ಹೊಟ್ಟೆ ಹಸಿವು ನಿಯಂತ್ರಣವಾಗುತ್ತದೆ.
ನಮ್ಮ ದೇಹದ ಹೆಚ್ಚುವರಿ ಕ್ಯಾಲರಿಗಳು ಕಡಿಮೆಯಾಗುತ್ತವೆ. ಆರೋಗ್ಯಕರ ಕೊಬ್ಬು ಮತ್ತು ನಾರಿನ ಅಂಶ ಇರುವಂತಹ ಬಾದಾಮಿ ಬೀಜಗಳು ನಮಗೆ ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತವೆ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸುತ್ತವೆ. ಜೊತೆಗೆ ಬಾದಾಮಿ ಬೀಜಗಳಲ್ಲಿ ಕಡಿಮೆ ಸಿಹಿ ಸೂಚ್ಯಂಕ ಇರುವುದರಿಂದ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತವೆ.
ಮಹಿಳೆಯರಿಗೆ ಬಾದಾಮಿ ಬೀಜಗಳು ಒಂದು ಆರೋಗ್ಯಕರ ಸ್ನಾಕ್ಸ್ ಆಗಿದ್ದು, ಸಮತೋಲನ ಆಹಾರ ಪದ್ಧತಿಯಲ್ಲಿ ನೆರವಾಗುತ್ತದೆ. ನಮ್ಮ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಕೊಡುವ ಜೊತೆಗೆ ಕ್ಯಾಲೋರಿಗಳ ನಿರ್ವಹಣೆ ಮಾಡಿ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಇವು ನೆರವಾಗುತ್ತವೆ.






