ನಾನು ಡಾಕ್ಟರ್ ಆದರೂ ಆ ವೃತ್ತಿಯನ್ನು ಎಂದೂ ಮಾಡಲಿಲ್ಲ… !

Date:

ಮೆಡಿಕಲ್ ಓದುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ನಮ್ಮ ಬಡ ಜನತೆ ಹಾಗೂ ಬಂಧುಗಳು ಆಹಾರ ಮತ್ತು ನೀರಿಗೆ ಬಹಳ ಕಷ್ಟ ಪಡುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಜನರಿಗೆ ಆಸ್ಪತ್ರೆಗಳಲ್ಲಿ ಸರಿಯಾದ ರೀತಿಯ ಚಿಕಿತ್ಸೆಯೂ ನೀಡುತ್ತಿರಲಿಲ್ಲ ಅದೇ ರೀತಿಯಾಗಿ ಅವರಿಗೆಲ್ಲಾ ಕುಡಿಯಲು ನೀರು ತಿನ್ನೋಕೆ ಆಹಾರವನ್ನೂ ಕೂಡ ಆಸ್ಪತ್ರೆಗಳಲ್ಲಿ ನೀಡುತ್ತಿರಲಿಲ್ಲ. ಮೊದಲೇ ಬಡ ಜನತೆ.. ಕೈಯಲ್ಲಿ ಬಿಡಿಗಾಸಿಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರಿಗೆಲ್ಲಾ ಹೊರ ಭಾಗಗಳಿಂದ ನೀರು ಆಹಾರವನ್ನ ಹೇಗೆ ತರ್ತಾರೆ ಹೇಳಿ.. ಆದ್ರೂ ಕೂಡ ವಿಧಿ ಇಲ್ಲದೇ ಸಾಲ ಸೂಲ ಮಾಡಿಕೊಂಡು ಹೊರ ಭಾಗಗಳಿಂದ ನೀರು ಆಹಾರ ತರ್ತಾ ಇದ್ರು. ಅದೂ ಕೂಡ ಹೆಚ್ಚಿನ ಬೆಲೆ ಕೊಟ್ಟು..! ಈ ಒಂದು ಕರಾಳ ಪರಿಸ್ಥಿತಿ ಅಂದು ನನಗೆ ಸಮಾಜ ಸೇವೆಯತ್ತ ಧುಮುಕುವತ್ತ ಸಹಕಾರಿಯಾಯಿತು. ಅಂದಿನ ಸಮಯದಲ್ಲಿ ನಾನು ನನ್ನ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಆಸ್ಪತ್ರೆಯ ಹೊರ ಭಾಗದಲ್ಲಿ ಒಂದು ಉಚಿತ ನೀರಿನ ಅಂಗಡಿಯನ್ನು ತೆರೆದೆ. ಬಡ ಜನರಿಗೆ ಉಪಯೋಗವಾಗಲೀ ಎಂದು 24 ಗಂಟೆಗಳ ಕಾಲ ಉಚಿತ ನೀರು ಸಿಗುವಂತೆ ಮಾಡಿದೆ. ಯಾವುದೇ ಆದಾಯದ ನಿರೀಕ್ಷೆಯನ್ನು ಇಡದೇ ತನ್ನ ಸ್ವಂತ ಹಣದಲ್ಲೇ ಈ ಸೇವೆಯನ್ನು ಮಾಡಲು ಆರಂಭಿಸಿದೆ. 1987ರಲ್ಲಿ ನನ್ನ ಮೆಡಿಕಲ್ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ನನಗೆ ವೈದ್ಯ ವೃತ್ತಿಯೂ ದಕ್ಕಿತು. ಅಂದು ನಾನು ನಿರ್ಧಾರ ತೆಗೆದದ್ದು ನಮ್ಮ ಬಡ ಮಕ್ಕಳಿಗೆ ಉಚಿತ ಆಹಾರ ಒದಗಿಸಬೇಕೆಂದು ಪ್ರತಿಜ್ಞೆ ಮಾಡಿಕೊಂಡೆ. ಅದೇ ರೀತಿಯಾಗಿ ಅದನ್ನು ಅನುಸರಿಸಿದೆ ಕೂಡ. ಬೆಳಿಗ್ಗೆ 6 ಗಂಟೆಯಿಂದ 8ರ ವರೆಗೆ ಬಡ ರೋಗಿಗಳಿಗೆ ನಾನು ಉಚಿತ ಟೀ ಹಾಗೂ ಕಿಚಡಿಯನ್ನು ನೀಡಲು ಆರಂಭಿಸಿದೆ. ಆದರೆ ಇವೆಲ್ಲಾ ನನ್ನ ವೃತ್ತಿಯ ಒಂದು ಭಾಗವಾಗಿ ಮಾಡಿಕೊಂಡಿಲ್ಲ.. ಬದಲಾಗಿ ಇದೊಂದು ಸಮಾಜ ಸೇವೆ ಎಂಬ ಭಾವನೆಯಿಂದ ಈ ರೀತಿಯ ಸೇವೆಗೆ ನಾನು ಕೈ ಹಾಕಿದೆ. ಅದರಿಂದ ನನಗೂ ತೃಪ್ತಿ ಇದೆ ಹಾಗೂ ನನ್ನ ಕಾರ್ಯವೈಖರಿಯ ಬಗ್ಗೆ ನನಗೆ ಹೆಮ್ಮೆಯಿದೆ. ಸುಮಾರು 29 ವರ್ಷಗಳಿಂದ ನಾನು ಹಾಗೂ ನನ್ನ ಹೆಂಡತಿ ಈ ಸೇವೆಯನ್ನ ಮಾಡ್ತಾ ಬಂದಿದ್ದು, ವರ್ಷಗಳು ಕಳೆಯುತ್ತಿದ್ದಂತೆಯೇ ನಮ್ಮಲ್ಲೇ ಏನೋ ಒಂದು ರೀತಿಯ ವ್ಯತಿರಿಕ್ತ ಬದಲಾವಣೆಗಳಾದವು. ಇನ್ನು ನಾವು ಇಷ್ಟು ವರ್ಷಗಳ ಕಾಲ ನಾವು ಬಡ ಬಂಧುಗಳಿಗೆ ನೀಡ್ತಾ ಇರೋ ಉಚಿತ ಆಹಾರ ಹಾಗೂ ನೀರು ಸೇವೆಯು ಯಾವುದೇ ಒಂದು ಕಮ್ಯೂನಿಟಿಗೆ ಮಾತ್ರ ಮಾಡ್ತಾ ಇರಲಿಲ್ಲ ಬದಲಾಗಿ ಇಡೀ ಮಾನವ ಸಮೂಹಕ್ಕಾಗಿ ನಿಯೋಜಿಸಲ್ಪಟ್ಟ ಈ ಸೇವೆಯಾಗಿತ್ತು. ಯಾವುದೇ ಒಂದು ಜಾತಿ, ಜನಾಂಗಕ್ಕೆ ಮಾತ್ರ ಸಿಮಿತವಾಗಿಡದೇ ಆಸ್ಪತ್ರೆಗೆ ಬರುವ ಸಾವಿರಾರು ಬಡ ಜನರಿಗೆಂದೆ ನಮ್ಮ ಸೇವೆಯನ್ನ ಮುಡುಪಾಗಿಟ್ಟಿದ್ದೆವು. ನಮ್ಮ ಸೇವೆ ಒಂದು ರೀತಿಯ ದೇವಾಲಯವಿದ್ದಂತೆ. ಅಲ್ಲಿ ಹೇಗೆ ಎಲ್ಲಾ ವರ್ಗಗಳಿಗೂ ಮುಕ್ತ ಅವಕಾಶವಿತ್ತೋ ನಮ್ಮ ಸೇವೆಯೂ ಕೂಡ ಯಾವುದೇ ಭೇದ ಭಾವವಿಲ್ಲದೇ ಮುಕ್ತವಾಗಿತ್ತು. ಪ್ರತಿದಿನ ನಾವು 500 ಬಡ ಬಗ್ಗರಿರೆ ಆಹಾರ ವ್ಯವಸ್ಥೆಯನ್ನ 4 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೆವು. ಸಮಾಜದಲ್ಲಿ ನೀವು ಯಾವ ಪದವಿ ಪಡೆದ್ದಿದ್ದೇಯ ಅನ್ನೋದು ಮುಖ್ಯವಲ್ಲ, ನೀನು ಯಾವ ಹುದ್ದೆಯಲ್ಲಿದ್ದೀಯ ಅನ್ನೊದು ಮುಖ್ಯವಲ್ಲ ಇಲ್ಲಿ ಮುಖ್ಯವಾಗಿರೊದು ನೀನು ಮಾಡುವ ಸೇವೆ. ನಿನ್ನ ನಿಸ್ವಾರ್ಥ ಸೇವೆ… ಆದ್ದರಿಂದಲೇ ನಾನು ಹೆಮ್ಮೆಯಿಂದ ಹೇಳಿಕೊಳ್ತೇನೆ ನಾನೊಬ್ಬ ವೈದ್ಯನಾಗಿದ್ದರೂ ಈ ಸೇವೆ ನನಗೆ ತೃಪ್ತಿ ನೀಡುತ್ತಿದೆ.
ಈ ಒಂದು ಸಣ್ಣ ಸಂದೇಶದಿಂದ ನಮಗೆ ತಿಳಿಯುವುದೇನೆಂದರೆ ಸಣ್ಣ ವಯಸ್ಸಿನಲ್ಲೋ ಅಥವಾ ಶಾಲಾ ದಿನಗಳಲ್ಲೋ ನಾವೆಲ್ಲಾ ಅನೇಕ ಬಾರಿ ಭಾರತೀಯರಲ್ಲರೂ ನಮ್ಮ ಸಹೋದರ ಸಹೋದರಿಯರು ಎಂದು ಶಪಥ ಮಾಡಿದ್ದೇವೆ. ನಾವು ಸಮಾಜಕ್ಕಾಗಿ ಏನಾದರೊಂದು ಕೊಡುಗೆ ನೀಡುತ್ತೇನೆಂಬ ಭರವಸೆಯನ್ನೂ ಕೂಡ ನಾವು ಅಂದು ಮಾಡಿದ್ದೇವೆ. ಆದರೆ ಆ ಪ್ರತಿಜ್ಞೆಯನ್ನು ನಾವೆಲ್ಲಾ ಎಂದು ಪಾಲಿಸಿದ್ದೇವೆ ಹೇಳಿ..? ಬಾಲ್ಯದ ಶಪಥವನ್ನೆಲ್ಲಾ ಮೂಲೆ ಗುಂಪು ಮಾಡಿ ನಮ್ಮ ಜೀವನವನ್ನು ನೋಡಿಕೊಂಡರೆ ಸಾಕು ಅನ್ನೋ ಮನೋಭಾವದಲ್ಲಿಂದು ನಾವು ಬದುಕು ನಡೆಸುತ್ತಿದ್ದೇವೆ. ಆದರೆ ಇಂದು ನಿರ್ಗತಿಕರಾಗಿರುವವರೆಲ್ಲರೂ ನಮ್ಮ ಸಹೋದರ ಸಹೋದರಿಯರೇ.. ಕಿತ್ತು ಬಡತನದಿಂದ ಬೇಸತ್ತು ಬಿಕ್ಷೆ ಎತ್ತುತ್ತಿರುವವರೆಲ್ಲರೂ ನಮ್ಮವರೇ.. ಆದ್ದರಿಂದ ಇನ್ನು ಮುಂದಾದರೂ ನಾವು ಅಂದು ಪ್ರತಿಜ್ಞೆ ಮಾಡಿದ್ದ ಶಪಥವನ್ನು ನಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡೋಣ..

Like us on Facebook  The New India Times

POPULAR  STORIES :

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

Share post:

Subscribe

spot_imgspot_img

Popular

More like this
Related

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ...

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ? ಮೂಸಂಬಿ ಹಣ್ಣು ಯಾವ...

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...