ಬೆಂಗಳೂರು: ಪ್ರಜ್ವಲ್ ಖಾಸ್ ಬಹಿರಂಗ ಕೇಸ್ ಗೆ ಸಂಬಂಧಿಸಿದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಿಗೆ ನೋಟಿಸ್ ನೀಡಲಾಗಿದೆ ಹಾಸನದ ಸೆನ್ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್‌ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ ಹೆಸರಗಳಲ್ಲಿ ಒಂದು ಹೆಸರು ಚೇತನ್. ಸದ್ಯ ಎಸ್‌ಐಟಿ ಯಿಂದ ಚೇತನ್ ಗೌಡ ಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ
ಇಂದು ಚೇತನ್ ಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದ್ದು, ಬೆಳಗ್ಗೆ 11 ಗಂಟೆ ಮೊದಲು ಬರಲು ಸೂಚನೆ ನೀಡಲಾಗಿದೆ. ಹೀಗಾಗಿ ಚೇತನ್ ಸಿಐಡಿ ಕಚೇರಿಗೆ ಬರಲಿದ್ದಾರೆ. ಪೆನ್ ಡ್ರೈವ್ ಲೀಕ್ ವಿಚಾರವಾಗಿ ಚೇತನ್ ಗೌಡ ನನ್ನು ಎಸ್.ಐ.ಟಿ ವಿಚಾರಿಸುವ ಸಾಧ್ಯತೆ ಇದೆ
ಇನ್ನೂ ಪ್ರಜ್ವಲ್ ರೇವಣ್ಣ ಅವರು ಬರಲಿ ವಿಚಾರಣೆ ಎದುರಿಸಲಿ. ಸಂತ್ರಸ್ತೆಯರಲ್ಲಿ ಜೆಡಿಎಸ್ ಕಾರ್ಯಕರ್ತರೆಯರೇ ಹೆಚ್ಚಾಗಿದ್ದಾರೆ. ಅವರಿಗೆಲ್ಲ ನ್ಯಾಯ ದೊರಕಬೇಕು. ಪ್ರಜ್ವಲ್ ಕೇಸ್‌ನಿಂದ ಎಷ್ಟೋ ಜನ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಎಸ್‌ಐಟಿ ಮುಂದೆ ವಿಚಾರಣೆಗೆ ಅವರೂ ಬರಲಿ, ನಾನೂ ಹಾಜರಾಗುತ್ತೇನೆ ಎಂದು ಅಶ್ಲೀಲ ವಿಡಿಯೊ ವೈರಲ್ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿರುವ ನವೀನ್ ಗೌಡ ಹೇಳಿದ್ದಾನೆ
ಪ್ರಜ್ವಲ್ ಖಾಸ್ ಬಹಿರಂಗ ಕೇಸ್: ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಿಗೆ ನೋಟಿಸ್
Date:






