ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಮಲಗುತ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ. ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು.ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಪರಿಶೀಲನೆ ಮುಗಿಸಿ ಬೆಳಗ್ಗೆ 4 ಗಂಟೆಗೆ ಹೊರಬಿದ್ದವು. ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.
ಹಾಸನ ಸಂಸದರು ತಮ್ಮ ಅಧಿಕೃತ ನಿವಾಸಕ್ಕೇ ಸಂರಸ್ತ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನು ಸ್ವತಃ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಾಕ್ಷಿಗಳ ಸಂಗ್ರಹ ಮಹತ್ವ ಪಡೆದಿದೆ. ಈ ಹಾಸಿಗೆ ಹೊದಿಕೆಗಳ ಮೇಲಿರಬಹುದಾದ ಡಿಎನ್‌ಎ ಸಾಕ್ಷಿಗಳ ಸಂಗ್ರಹ ಹಾಗೂ ಪರಿಶೀಲನೆಗೆ ಎಫ್‌ಎಸ್‌ಎಲ್ ಮುಂದಾಗಲಿದೆ.
ಮೇ 31ಕ್ಕೆ ಪ್ರಜ್ವಲ್ ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ, ಪೂರಕ ಸಾಕ್ಷಿ ಕಲೆಹಾಕಲು ಮುಂದಾಗಿದೆ. ಹಾಸನದಲ್ಲಿರುವ ಸಂಸದರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕೊಂಡೊಯ್ದಿದೆ. ಇದಕ್ಕಾಗಿ ನಿನ್ನೆ ಇಡೀ ತಪಶೀಲು ನಡೆಸಿದ ತಂಡ, ಹಾಸನ ನಗರ ಠಾಣೆ ಪೊಲೀಸರ ಸಹಾಯ ಪಡೆಯಿತು






