ದರೋಡೆಕೋರರು ಸಾಮಾನ್ಯವಾಗಿ ಯಾರ ಮೇಲಾದ್ರೂ ದಾಳಿ ಮಾಡಿದ್ರೆ ಅವರನ್ನ ಅಲ್ಲೆ ಕೊಲೆ ಮಾಡಿಯೋ ಅಥವಾ ಗಂಭೀರವಾಗಿ ಗಾಯ ಮಾಡಿ ಇರೋ ಬರೋ ನಗ ನಾಣ್ಯವನ್ನ ದೋಚಿ ಪರಾರಿಯಾಗೋದು ಕೇಳಿದ್ದೇವೆ. ಆದ್ರೆ ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಘಟನೆಯೊಂದು ನಡೆದು ಹೋಗಿದೆ ನೋಡಿ..! ಮನೆ ದರೋಡೆ ಮಾಡಲು ಬಂದ ಆರು ಜನ ದರೋಡೆಕೋರರು ಮನೆಯ ಯಜಮಾನನಿಗೆ ಆಯುಧಗಳಿಂದ ಹಲ್ಲೆ ನಡೆಸಿದ್ದಲ್ಲದೇ ಯಾರೂ ಊಹಿಸಲಾಗದ ಕೆಲಸವೊಂದನ್ನು ಮಾಡಿ ಹೋಗಿದ್ದಾರೆ..!
ಸಂಜೀತ್ ಸಿಂಗ್ ಎಂಬಾತ ಬ್ಯಾಕ್‍ನಿಂದ 6 ಲಕ್ಷ ರೂ. ಲೋನ್ ತೆಗೆದುಕೊಂಡಿದ್ದಾನೆಂಬ ವಿಷಯ ತಿಳಿದುಕೊಂಡ ಆರು ಜನ ದರೋಡೆಕೋರರು ರಾತ್ರಿ ಅವರ ಮನೆಗೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ ಸಂಜೀತ್ ಸಿಂಗ್ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಂಡ ದರೊಡೆಕೋರರು ಅವರೆನ್ನೆಲ್ಲಾ ಮನೆಯ ಒಂದು ರೂಮಿನಲ್ಲಿ ಕೂಡಿಹಾಕಿದ್ದರಲ್ಲದೇ ಸಂಜೀತ್ ಸಿಂಗ್ ಅವರನ್ನು ಎಳೆ ತಂದು ಕುಡುಗೋಲಿನಿಂದ ಹಲ್ಲೆ ಮಾಡಿ 6 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ.
ವಾಸ್ತವ ಸಂಗತಿ ಏನಂದ್ರೆ ಸಂಜೀತ್ ಸಿಂಗ್ ಬ್ಯಾಂಕ್‍ನಿಂದ 60 ಸಾವಿರ ರೂ. ಲೋನ್ ಪಡೆದುಕೊಂಡಿದ್ದು, ಅದರ ಪೈಕಿ 10 ಸಾವಿರ ರೂ ಡ್ರಾ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ನಂಬದ ದರೋಡೆಕೋರರ ತಂಡ ಮತ್ತೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ಸಂಜೀತ್ ಸಿಂಗ್ ಬ್ಯಾಂಕ್ ದಾಖಲೆಗಳನ್ನು ತೋರಿಸಿದ ಮೇಲೆಯೇ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾರೆ. ಆಗಲೇ ತಮಗೆ ತಪ್ಪು ಮಾಹಿತಿ ಬಂದಿರೋದು ಅರಿವಾಗಿದೆ. ಇನ್ನು 10 ಸಾವಿರದ ಹಣದಲ್ಲಿ ಸಂಜೀತ್ ಸಿಂಗ್ ಈಗಾಗಲೇ 2 ಸಾವಿರ ರೂ. ಹಣವನ್ನು ಖರ್ಚು ಮಾಡಿದ್ದಾರೆ ಎಂದು ಕೂಡ ಗಮನಕ್ಕೆ ಬಂದಿದೆ.
ಭಾರೀ ಮೊತ್ತದ ಹಣವನ್ನು ಲೂಟಿ ಮಾಡಲು ಬಂದ 6 ಜನ ದರೋಡೆಕೊರರಿಗೆ ಕೊನೆಗೆ ಸಿಕ್ಕಿದ್ದು ಕೇವಲ 8 ಸಾವಿರ ರೂಪಾಯಿ. ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದ ದರೋಡೆಕೋರರು ಆ 8 ಸಾವಿರ ಹಣ ಹಾಗೂ ಕೆಲ ಆಭರಣಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಕ್ಲೈಮ್ಯಾಕ್ಸ್‍ನಲ್ಲಿ ದರೋಡೆಕೊರರಿಗೆ ಮಾಡಿದ ತಪ್ಪು ಅರಿವಾಯಿತೋ ಏನೋ ಇಬ್ಬರು ದರೋಡೆಕೋರರು ಹೊರಗಡೆ ಇದ್ದ ಅಲೋವೇರಾವನ್ನು ಕತ್ತಲಲ್ಲೂ ಹುಡುಕಿ ತಂದು ಕುಡುಗೋಲಿನಿಂದ ಹೊಡೆದ ಭಾಗವನ್ನೆಲ್ಲಾ ನೀರಿನಿಂದ ತೊಳೆದು ಗಾಯವಾದ ಜಾಗಕ್ಕೆಲ್ಲಾ ಅಲೋವೇರಾ ರಸವನ್ನು ಹಚ್ಚಿದ್ದಾರೆ.
ಅಲ್ಲದೇ ರಕ್ತ ಸುರಿಯುತ್ತಿದ್ದ ಸಂಜೀತ್ ಸಿಂಗ್ ತಲೆಗೆ ಬ್ಯಾಂಡೇಜ್ ಕಟ್ಟಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಜೀತ್ ಸಿಂಗ್, ಆ ಆರು ದರೋಡೆಕೋರರು ನನ್ನನ್ನು ಹಾಗೂ ಕುಟುಂಬ ಸದಸ್ಯರನ್ನೆಲ್ಲಾ ಕೊಲೆ ಮಾಡಲು ಬಂದಿದ್ದರು ಎಂದಿರುವ ಅವರು ದೇವರ ದಯೆಯಿಂದ ನಾವೆಲ್ಲಾ ಬಚಾವಾದೆವು ಎಂದು ಹೇಳಿದ್ದಾರೆ.
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!