ಬೆಂಗಳೂರು: ರಾಹುಲ್ ಗಾಂಧಿ ಅವರೇ ಪ್ರತಿಪಕ್ಷ ಆಗಲಿ ಅಂತ ನಮ್ಮೆಲ್ಲರ ಆಸೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರೇ ಪ್ರತಿಪಕ್ಷ ಆಗಲಿ ಅಂತ ನಮ್ಮೆಲ್ಲರ ಆಸೆ. ಇದನ್ನು ಇಂಡಿಯಾ ಒಕ್ಕೂಟ ತೀರ್ಮಾನಿಸಲಿದೆ.
ರಾಹುಲ್ ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿದ್ದಾರೆ. ಹೀಗಾಗಿ ಅವರೇ ಪ್ರತಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ. ಇಂಡಿಯಾ ಕೂಟ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಹೇಳಿದರು.
ರಾಹುಲ್ ಗಾಂಧಿ ಅವರೇ ಪ್ರತಿಪಕ್ಷ ಆಗಲಿ ಅಂತ ನಮ್ಮೆಲ್ಲರ ಆಸೆ !
Date: