ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹು ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರ ಮಧ್ಯೆ ಒಬ್ಬ ಸಚಿವರ ತಲೆದಂಡ ಕೂಡ ಆಗಿದೆ. ಇನ್ನೂ ಈ ಸಂಬಂಧ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದಾಶಿವ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ವಾಲ್ಮೀಕಿ ನಿಗಮ ಹಣಕಾಸು ಅವ್ಯವಹಾರ ಪ್ರಕರಣದ ತನಿಖೆಯನ್ನು ಹಸ್ತಾಂತರ ಮಾಡುವಂತೆ ಈವರೆಗೂ ಸಿಬಿಐ ನಮಗೆ ಪತ್ರ ಬರೆದಿಲ್ಲ. ಆದರೆ, ಓರಲಿ ಕೇಳಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಅಧಿಕೃತವಾಗಿ ನಮಗೆ ಪತ್ರ ಬಂದಿಲ್ಲ ಎನ್ನುವ ಮಾಹಿತಿ ಇದೆ.
ನಿನ್ನೆ ಮೊನ್ನೆ ಏನಾದರೂ ಬಂದಿದ್ದರೆ. ಅದರ ಪ್ರಕಾರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಇನ್ನೂ ಇಷ್ಟು ದಿನ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಮಾದರಿ ನೀತಿ ಸಂಹಿತೆ ಇತ್ತು. ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಗಿರಲಿಲ್ಲ. ಈಗ ಅದಕ್ಕೆಲ್ಲ ಚಾಲನೆ ಕೊಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದರು.
ವಾಲ್ಮೀಕಿ ನಿಗಮದ ಅಧಿಕಾರಿಯೊಬ್ಬನ ಆತ್ಮಹತ್ಯೆ ಬಳಿಕ ನಿಗಮದಲ್ಲಿ ನಡೆದ ಬೃಹತ್ ಅಕ್ರಮ ಹಣ ವರ್ಗಾವಣೆ ವಿಚಾರ ಬಹಿರಂಗವಾಯ್ತು. ಬಳಿಕ ನಾಗೇಂದ್ರ ತಲೆದಂಡ ಕೂಡ ಆಯ್ತು. ಇದೀಗ ಮತ್ತೊಬ್ಬ ಸಚಿವ, ಶಾಸಕರ ಶರಣು ಪ್ರಕಾಶ್ ಪಾಟೀಲ್ ಹೆಸರು ಕೂಡ ಇದರಲ್ಲಿ ತಳುಕು ಹಾಕಿಕೊಂಡಿದೆ. ಅಕ್ರಮದ ಸಾಕ್ಷ್ಯಗಳ ನಾಶಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲೇ ಪ್ಲಾನ್ ಆಗಿತ್ತು ಅನ್ನೋ ಆರೋಪ ಕೇಳಿ ಬಂದಿದೆ.
ವಾಲ್ಮೀಕಿ ಪ್ರಕರಣ: ತನಿಖೆ ಸಿಬಿಐಗೆ ಹಸ್ತಾಂತರ ಮಾಡುವಂತೆ ನಮಗೆ ಪತ್ರ ಬರೆದಿಲ್ಲ !
Date: