ಬೆಂಗಳೂರು: ಕೊಲೆ ಕೇಸ್ ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರೋ ನಟ ದರ್ಶನ್ ಅವ್ರನ್ನ ಬಚಾವ್ ಮಾಡೋ ಪ್ರಯತ್ನಗಳು ಶುರುವಾಗಿದೆಯಂತೆ. ಕೆಲವು ರಾಜಕಾರಣಿಗಳು ಕೇಸ್ ನಲ್ಲಿ ಪ್ರಭಾವ ಬೀರುತ್ತಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಸೆಲೆಬ್ರಿಟಿಗಳು, ದರ್ಶನ್ ಫ್ಯಾನ್ಸ್ ಮಾತ್ರವಲ್ಲ, ರಾಜಕೀಯ ವಲಯದಲ್ಲೂ ಈ ಪ್ರಕರಣ ಸದ್ದು ಮಾಡ್ತಿದೆ. ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯ ಭೀಕರ ಕೊಲೆ ಪ್ರಕರಣಕ್ಕೆ ಒಂದೊಂದೇ ಟ್ವಿಸ್ಟ್ ಸಿಗ್ತಿದೆ. ದರ್ಶನ್ ಅವ್ರನ್ನ ಬಚಾವ್ ಮಾಡಲು ಕೆಲವು ರಾಜಕಾರಣಿಗಳು ಪ್ರಯತ್ನ ಮಾಡಿದ್ದರೆಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.ಹೇಳಿ ಕೇಳಿ ನಟ ದರ್ಶನ್ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ.ಕೆಲವು ರಾಜಕಾರಣಿಗಳು ಚುನಾವಣಾ ಸಂದರ್ಭಗಳಲ್ಲಿ ದರ್ಶನ್ ಅವ್ರನ್ನ ಕರೆಸಿ, ಪ್ರಚಾರ ಸಾಮಗ್ರಿಯಾಗೂ ಬಳಸಿಕೊಂಡಿದ್ದಾರೆ. ದರ್ಶನ್ ಕೂಡ ಕೆಲವು ಪೊಲಿಟಿಶಿಯನ್ ಗಳ ಜೊತೆ ಅಷ್ಟೇ ಆತ್ಮೀಯವಾಗಿ ಇದ್ದಾರೆ.ಅವ್ರ ಪಾರ್ಟಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈಗ ಕೊಲೆ ಕೇಸ್ ನಲ್ಲಿ ಆಪ್ತ ಬಳಗದಲ್ಲಿರೋ ರಾಜಕಾರಣಿಗಳು ದರ್ಶನ್ ಅವ್ರನ್ನ ಬಚಾವ್ ಮಾಡಲು ಪ್ರಯತ್ನ ಮಾಡಿದ್ರು ಎಂಬ ಸಂಗತಿ ಹೊರ ಬಿದ್ದಿದೆ.ದರ್ಶನ್ ಕೂಡ ಕೆಲ ರಾಜಕಾರಣಿಗಳಿಗೆ ಕಾಲ್ ಮಾಡಿ, ಕೊಲೆ ಕೇಸ್ ನಿಂದ ಹೊರ ತರಲು ಮಾತಾಡಿದ್ದಾರೆ ಎನ್ನಲಾಗಿದೆ.ಆದ್ರೆ ಆ ರಾಜಕಾರಣಿ ಯಾರು..? ದರ್ಶನ್ ಕರೆ ಮಾಡಿ ಯಾರ್ ಜೊತೆ ಮಾತಾಡಿದ್ರು ಅನ್ನೋದೆಲ್ಲಾ ಪೊಲೀಸರಿಂದಲೇ ಗೊತ್ತಾಬೇಕು.
ಕೊಲೆ ಕೇಸ್ʼನಿಂದ ದರ್ಶನ್ ಎಸ್ಕೇಪ್ ಮಾಡಲು ರಾಜಕೀಯ ಪಿತೂರಿ..!
Date: