ನನ್ನ ಪತ್ನಿ ಹಿಂದೆಂದೂ ಜೀವನದಲ್ಲಿ ಕೆಲಸಕ್ಕೆ ಹೋದವಳಲ್ಲ ಈಗ ಈ ವಯಸ್ಸಿಗೆ ಕೆಲಸಕ್ಕೆ ಕಳಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ..

Date:

ಅದೊಂದು ದಿನ ನಾನು ಕಾಲೇಜಿನಿಂದ ಮರಳಿ ಮನೆಗೆ ಹೋಗುವ ಸಮಯ. ಕಾಲೇಜಿನಿಂದ ಸ್ವಲ್ಪ ದೂರದಲ್ಲೇ ಒಂದು ಬಸ್ ಸ್ಟ್ಯಾಂಡ್ ಇರೋದ್ರಿಂದ ಪ್ರತಿ ದಿನವೂ ನಾನು ಅಲ್ಲಿಂದಲೇ ಬಸ್ ಹಿಡಿದು ಮನೆಗೆ ಸೇರೋದು. ಹೀಗೆ ಅದೊಂದು ದಿನ ಬಸ್ ಸ್ಟಾಂಡ್ ಬಳಿ ಹೋಗೋ ವೇಳೆಗೆ ದಾರಿ ಮಧ್ಯೆ ಇದ್ದಕ್ಕಿದ್ದ ಹಾಗೆ ನನ್ನ ಚಪ್ಪಲಿ ಕಿತ್ತು ಹೊಯ್ತು.. ಅವತ್ತು ಚಪ್ಪಲಿ ಹೊಲಿಸಿಕೊಳ್ಳೊಕಂತಲೇ ಇಡೀ ದಿನ ರೋಡ್ ರೋಡು ಸುತ್ತಬೇಕಾಗಿತ್ತು ನೋಡಿ.. ಆದ್ರೆ ಪ್ರತೀ ದಿನವೂ ನಾನು ಕಾಲೇಜಿಗೆ ಹೋಗೋದು ಒಂದೇ ಮಾರ್ಗವಾಗಿದ್ದರೂ ಸಹ ಎಂದೂ ಕೂಡ ಆ ದಾರಿಯಲ್ಲಿ ಚಪ್ಪಲಿ ಹೊಲಿಯುವವನನ್ನು ನೋಡಿರಲಿಲ್ಲ. ಆದ್ರೆ ಆ ವ್ಯಕ್ತಿ ಮಾತ್ರ ಮಳೆ ಚಳಿ ಬೇಸಿಗೆಯಲ್ಲೂ ಅಲ್ಲೇ ಕುಳಿತು ಚಪ್ಪಲಿ ಹೊಲಿಯುತ್ತಾನೆ ಅನ್ನೋದು ನನ್ನ ಚಪ್ಪಲಿ ಹರಿದು ಹೋದಾಗ್ಲೇ ಗೊತ್ತಾದದ್ದು ನೋಡಿ.. ಇದೇ ಜಾಗದಲ್ಲಿ ಪ್ರತಿ ದಿನವೂ ಓಡಾಡುತ್ತೇನೆ ಆದ್ರೆ ಈ ವ್ಯಕ್ತಿಯನ್ನು ನಾನು ನೋಡೇ ಇಲ್ವಲ್ಲಾ ಅಂತ ಮನದಲ್ಲೇ ಅನ್ಕೊಳ್ತಾ ನನ್ನ ಹರಿದ ಚಪ್ಪಲಿಗೆ ಹೊಲಿಗೆ ಹಾಕಿ ಕೊಡಿ ಎಂದೇಳಿ ಆ ವ್ಯಕ್ತಿಯ ಬಳಿ ಕೊಟ್ಟೆ. ಅವರೂ ಕೂಡ ನನ್ನ ಚಪ್ಪಲಿಯನ್ನ ನೀಟಾಗಿ ಹೊಲಿದು ವಾಪಾಸ್ಸು ಕೊಟ್ರು.. ಆದ್ರೆ ಅಲ್ಲಿಂದ ನಾನು ಹಿಂದಿರುಗುವಾಗ ನನಗೊಂದು ಅಚ್ಚರಿ ಕಾದಿತ್ತು ನೋಡಿ.. ಚಪ್ಪಲಿ ಹೊಲಿಯುತ್ತಿದ್ದ ಆ ವ್ಯಕ್ತಿ ಓರ್ವ ಅಂಗವಿಕಲ..! ಆತನಿಗೆ ಎರಡೂ ಕಾಲುಗಳಿಲ್ಲದಿದ್ದನ್ನು ನೋಡಿ ನನ್ನ ಕಣ್ಣುಗಳು ಸ್ವಲ್ಪ ಸಮಯ ಅದನ್ನೇ ದಿಟ್ಟಿಸಿ ನೋಡ್ತಾ ಇತ್ತು.. ಕಣ್ಣುಗಳೂ ಕೂಡ ಸ್ವಲ್ಪ ತೇವಗೊಂಡವು..
ಆಗಲೇ ನನಗೆ ಈ ವ್ಯಕ್ತಿ ಜೀವನದ ಬಗ್ಗೆ ಕೇಳೋ ಉತ್ಸುಕತೆ ಬಂದಿದ್ದು.. 52 ವರ್ಷ ಭಾಯಿಲಾಲ್ ಕಳೆದ 10 ವರ್ಷಗಳ ಹಿಂದೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಈತನ ಮೇಲೆ ಹರಿದಿದೆ.. ಅಲ್ಲದೇ ಆ ಲಾರಿಯ ಎರಡೂ ಬದಿಯ ಚಕ್ರಗಳು ಬಾಯಿಲಾಲ್ ಅವರ ಕಾಲಿನ ಮೇಲೆ ಹತ್ತಿದೆ.. ಈ ಅನಿರೀಕ್ಷಿತ ಘಟನೆಯಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಈತ ಇಂದು ಜೀವನ ನಿರ್ವಹಣೆಗಾಗಿ ಚಪ್ಪಲಿ ಹೊಲಿಯುತ್ತಿದ್ದೇನೆ ಎಂದು ಹೇಳಿದ. ಅಪಘಾತಕ್ಕೂ ಮುನ್ನ ನಾನೊಬ್ಬ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡರು… ತನಗೆ ಒಬ್ಬ ಮಗಳಿದ್ದು ಆಕೆಗೆ ಮದುವೆ ಮಾಡಿಸಿದೆ. ಇದ್ದ ಒಬ್ಬ ಮಗನೂ ಕೂಡ ಕಳೆದ ಮೂರು ವರ್ಷಗಳ ಹಿಂದೆ ಮರಣವನ್ನಪ್ಪಿದ.. ಈಗ ನಾನು ನನ್ನ ಹೆಂಡತಿ ಮಾತ್ರ.. ನಮ್ಮಿಬ್ಬರ ಸಂಸಾರ ಯಾವ ಅಡ್ಡಿ ಆತಂಕವಿಲ್ಲದೇ ಸಾಗ್ತಾ ಇದೆ ಎಂದಾಗ.. ಅಲ್ಲಾ.. ನಿಮ್ಮ ಹೆಂಡತಿ ಇದಾರಲ್ವಾ.. ಈಗಲಾದರೂ ನಿಮ್ಮ ಬದಲಾಗಿ ಅವರು ಕೆಲಸಕ್ಕೆ ಹೋಗಿ ನಿಮಗೆ ಸಹಕಾರಿಯಾಗಬಹುದಲ್ಲವೇ ಎಂದಾಗ.. ಇಲ್ಲ ಸ್ವಾಮಿ.. ನನ್ನ ಪತ್ನಿ ಹಿಂದೆಂದೂ ಜೀವನದಲ್ಲಿ ಕೆಲಸಕ್ಕೆ ಹೋದವಳಲ್ಲ ಈಗ ಈ ವಯಸ್ಸಿಗೆ ಕೆಲಸಕ್ಕೆ ಕಳಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದಾಗ ಆ ಮಾತು ನನ್ನ ಮನಸ್ಸಿಗೆ ನಾಟಿ ಹೋಗಿತ್ತು.. ಪತ್ನಿಯ ಮೇಲಿದ್ದ ಪ್ರೀತಿ, ಕಾಳಜಿ ನೋಡಿ ನನಗೆ ತಲೆ ತಗ್ಗಿಸವಂತಾಯಿತು.. ಯಾಕಂದ್ರೆ ಇಂದಿನ ಸ್ಥಿತಿಯಲ್ಲಿ ಇಬ್ಬರು ದುಡಿದರೂ ಜೀವನ ನಿರ್ವಹಣೆ ಕಷ್ಟವಾಗಿರುವ ಕಾಲಘಟ್ಟದಲ್ಲಿ ತನ್ನ ಎರಡೂ ಕಾಲನ್ನು ಕಳೆದುಕೊಂಡರೂ ಏಕಾಂಗಿಯಾಗಿ ಜೀವನದ ಹೋರಾಟ ನಡೆಸುತ್ತಾ ಅದರಲ್ಲೇ ತನ್ನ ಸುಖವನ್ನು ಕಾಣುವ ಈ ವ್ಯಕ್ತಿಯ ಕ್ರೀಯಾಶೀಲತೆಗೆ ಎಷ್ಟು ಹೊಗಳಿದರೂ ಸಾಲದು ಅನ್ನಿಸುತ್ತಿತ್ತು.. ಇನ್ನು ಒಂದು ಆಶ್ಚರ್ಯಕರ ಸಂಗತಿ ಅಂದ್ರೆ ಭಾಯಿಲಾಲ್ ಅವರು ಎಂದೂ ಕೂಡ ಪರರ ಸಹಕಾರಕ್ಕೆ ಕೈಚಾಚಿದವರಲ್ಲವಂತೆ..! ಪ್ರತಿ ನಿತ್ಯ ತನ್ನ ಕೆಲಸದ ಸ್ಥಳಕ್ಕೆ ಮೂರು ಚಕ್ರದ ಸೈಕಲ್ ಸಹಕಾರದಿಂದ ಸಂಚಾರ ಮಾಡುವ ಇವರು, ಎಲ್ಲಾ ಕೆಲಸವನ್ನೂ ಸ್ವಯಂ ಪ್ರೇರಿತವಾಗಿ ಮಾಡಿಕೊಳ್ಳುತ್ತಾರೆ. ಸೈಕಲ್ ಏರುವಾಗ ಇಳಿಯುವಾಗದಿಂದ ಹಿಡಿದು ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಜೋಡಿಸಿಕೊಳ್ಳೊವರೆಗೂ ಕೂಡ ತಾನಾಗೆ ಮಾಡಿಕೊಳ್ಳುತ್ತಾರೆ. ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರೂ ಕೂಡ ಎಂದೂ ಕೂಡ ಅವರು ತಾನೋರ್ವ ಅಂಕವೈಕಲ್ಯ ಎಂಬ ಭಾವನೆಯೇ ಇಟ್ಟುಕೊಂಡಿಲ್ಲವಂತೆ.. ಸದಾ ಹಸೋನ್ಮುಖನಾಗಿರುತ್ತಿದ್ದ ಬಾಯ್‍ಲಾಲ್ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನಲ್ಲೇನೋ ಕೊರತೆ ಇದೆ ಎಂಬ ಭಾವನೆ ಇಟ್ಟುಕೊಂಡಿಲ್ಲ. ಅವರ ಈ ಸ್ಥತಿ ಕಂಡ ನಾನು ಎಂದಾದರೂ ನಿಮಗೆ ನನ್ನ ಸಹಾಯ ಬೇಕಿದ್ದರೆ ಈ ನಂಬರ್‍ಗೆ ಕರೆ ಮಾಡಿ ಎಂದು ನನ್ನ ಮೊಬೈಲ್ ನಂಬರ್ ಕೂಡ ಅವರಿಗೆ ನೀಡಿದ್ದೆ. ಆದ್ರೆ ಇಂದಿಗೂ ಕೂಡ ಆ ವ್ಯಕ್ತಿ ನನಗೆ ಕರೆ ಮಾಡಿಲ್ಲ ನೋಡಿ.. ಸುಮಾರು 10 ನಿಮಿಷಗಳ ಕಾಲ ಆ ವ್ಯಕ್ತಿ ಬಳಿ ಮಾಡಿದ ಸಂಭಾಷಣೆಯಲ್ಲಿ ಆ ವ್ಯಕ್ತಿಯ ಇಡೀ ಜೀವನದ ಸಂಪೂರ್ಣ ವಿಷಯವನ್ನು ತಿಳಿದುಕೊಂಡೆ.. ಕಾಲಿಗೆ ಚಪ್ಪಲಿ ಇಲ್ಲದಿದ್ದರೆ ಪರದಾಡುವ ನಾವು, ತನ್ನೆರಡೂ ಕಾಲಿಲ್ಲದಿದ್ದರೂ ಆ ಯೋಚನೆಯೇ ಇಲ್ಲದೇ ತನ್ನ ಪಾಡಿಗೆ ತಾನು ಇರುವುದನ್ನು ನೋಡುದ್ರೆ ನಿಜವಾಗ್ಲೂ ಅವರ ಮುಂದೆ ನಾವು ಏನೂ ಅಲ್ಲ..
ಇನ್ನು ನಮ್ಮ ರಾಷ್ಟ್ರದಲ್ಲಿನ ಭಿಕ್ಷುಕರಿಗೆಲ್ಲರಿಗೂ ಈ ವ್ಯಕ್ತಿ ಸೂಕ್ತ ನಿದರ್ಶನವೆಂದು ನಾನ್ ಅನ್ಕೊಳ್ತೀನಿ.. ಯಾಕಂದ್ರೆ ನೀವೆಲ್ಲಾ ಪ್ರತಿ ನಿತ್ಯ ನೋಡ್ತೀರಾ ಹಲವಾರು ಭಿಕ್ಷುಕರು ದೈಹಿಕವಾಗಿ ಸಧೃಡರಾಗಿರ್ತಾರೆ.. ದುಡಿದು ತಿನ್ನೋಕೆ ಸೋಮಾರಿತನ ಮಾಡುವ ಇವರು ಬೀದಿಯಲ್ಲಿ ಭಿಕ್ಷೆ ಬೇಡುವ ಕಾರ್ಯಕ್ಕೆ ಕೈ ಹಾಕುತ್ತಾರೆ. ಅವರಿಗೆ ದೇಹದ ಎಲ್ಲಾ ಭಾಗಗಳೂ ನೆಟ್ಟಗೇ ಇರ್ತಾವೆ. ಆದ್ರೆ ದುಡಿಯೋಕೆ ಮೈ ಭಾರ.. ಭಾಯ್‍ಲಾಲ್‍ಗೆ ಎರಡೂ ಕಾಲಿಲ್ಲದಿದ್ದರೂ ದುಡಿದು ತಿನ್ನುತ್ತಾರೆ.. ಕೈ ಚಾಚಿ ಭಿಕ್ಷೆ ಬೇಡುವುದಕ್ಕಿಂತ ಕಷ್ಟ ಪಟ್ಟು ದುಡಿದು ಅದರಲ್ಲಿ ಬರೋ ಹಣವನ್ನು ಪಡೆಯೋಣ ಎಂಬ ಮನಸ್ಥಿತಿ ಅವರದ್ದು.. ನಾವು ಅಷ್ಟೆ ತಮಗೆ ಕೆಲಸ ಮಾಡೋವಷ್ಟು ಸಾಮರ್ಥವಿದ್ದರೂ ಭಿಕ್ಷೆ ಬೇಡುತ್ತಾ ಬರುವ ಜನರಿಗೆ ತಿಳಿ ಹೇಳುವ ಅಭ್ಯಾಸ ಇಟ್ಟುಕೊಳ್ಳಬೇಕೇ ವಿನಃ ನಾವೇ ಹಣ ಕೊಟ್ಟು ಅವರಿಗೆ ಪ್ರೋತ್ಸಾಹ ನೀಡುವಂತಾಗಬಾರದು.

1-10
ನಮ್ಮ ಜೀವನದಲ್ಲಿನ ಒಂದು ಸಣ್ಣ ಘಟನೆ ಸಂಭವಿಸಿದರೂ ಅದಕ್ಕೆ ಕಾರಣರಾದವನನ್ನು ಪ್ರತೀ ದಿನ ನೆನೆದು ನನ್ನ ಈ ವೈಕಲ್ಯತೆಗೆ ಕಾರಣ ಆತನೇ ಎಂದು ಎಲ್ಲರೆದುರೂ ತಮ್ಮ ದುಃಖವನ್ನು ಹೇಳುವ ಇಂದಿನ ವ್ಯವಸ್ಥೆಯಲ್ಲಿ, ತನ್ನೆರಡು ಕಾಲನ್ನು ಕಳೆದುಕೊಂಡರೂ ಇಂದಿಗೂ ಈ ಅವಸ್ಥೆಗೆ ಕಾರಣನಾದವನಿಗೆ ಶಾಪ ಹಾಕದೆ ತನ್ನ ವಿಧಿಯ ಆಟವಷ್ಟೇ ಎನ್ನುತ್ತ ಜೀವನ ನೋಡಿಕೊಂಡು ಹೋಗೋ ಬಾಯ್‍ಲಾಲ್‍ರಂತಹ ಮನಸ್ಥಿಗಳು ಜಗತ್ತಿನಲ್ಲಿ ಅತೀ ವಿರಳ.. ನಾವೆಲ್ಲಾ ದುಬಾರಿ ಬಟ್ಟೆ ದುಬಾರಿ ಶೂ ಅದೂ ಕೂಡ ಬ್ರಾಂಡೆಡ್ ಜಾಗಗಳನ್ನು ಹುಡುಕಿ ಅಲ್ಲಿಂದ ಖರೀದಿ ಮಾಡೋ ನಮಗೆ ಒಂದು ದಿನವಾದರೂ ಕಾಲಿಲ್ಲದವನ ಬಗ್ಗೆ ಯೋಚಿಸಿದ್ದೇವಾ..? ವಿಧ ವಿಧದ ಜೀನ್ಸ್, ಶೂಗಳನ್ನು ನಮ್ಮ ಕಾಲಿಗೆ ಮ್ಯಾಚ್ ಆಗುತ್ತೋ ಇಲ್ವೋ ಎಂದು ನೋಡುವ ನಾವು ಎಂದೂ ಕೂಡ ಅಂಗವೈಕಲ್ಯರ ಬಗ್ಗೆ ಯೋಚನೆಯೂ ಮಾಡಿದವರಲ್ಲ.. ಹೇಳ್ಬೇಕು ಅಂದ್ರೆ ನಮ್ಮ ಜೀವನದಲ್ಲಿ ಆ ದೇವರು ಏನು ಕೊರತೆ ಇಟ್ಟಿಲ್ಲ.. ಬಾಯ್‍ಲಾಲ್‍ರನ್ನು ಹೋಲಿಸಿ ನೋಡುವುದಾದರೆ ಆ ದೇವರು ನಡೆದಾಡಲು ಕಾಲು ಕೊಟ್ಟಿದ್ದಾನೆ, ಮೂರೊತ್ತು ಊಟಕ್ಕೆ ದಾರಿ ಮಾಡಿಕೊಟ್ಟಿದ್ದಾನೆ, ಉಸಿರಾಡೋಕೆ ಶುದ್ದ ಗಾಳಿಯೂ ಕೊಟ್ಟಿದ್ದಾನೆ.. ಆದ್ರೆ ನಮ್ಮಲ್ಲಿ ಯಾಕಿಲ್ಲ ಸಹಕಾರದ ಮನೋಭಾವ.. ದುಡಿದು ತಿನ್ನುವ ಇಚ್ಚಾಶಕ್ತಿ..? ಅದೇನೇ ಆದರೂ ಅಂಕವೈಕಲ್ಯತೆಯಿಂದ ನರಳುತ್ತಿದ್ದರೂ ಕೂಡ ತಿರುಪೆ ಎತ್ತುವುದೇ ಮಾರ್ಗ ಅಲ್ಲ, ಕಷ್ಟ ಪಟ್ಟು ದುಡಿದು ತಿನ್ನೋದೆ ನಿಜವಾದ ಜೀವನ ಎಂದು ತೋರಿಸಿಕೊಟ್ಟಿರೋ ಬಾಯ್‍ಲಾಲ್‍ಗೆ ನಮ್ಮದೊಂದು ಸೆಲ್ಯೂಟ್..

  • ಪ್ರಮೋದ್ ಲಕ್ಕವಳ್ಳಿ

courtesy : ದಿ ಲಾಜಿಕಲ್ ಇಂಡಿಯನ್

Like us on Facebook  The New India Times

POPULAR  STORIES :

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

Share post:

Subscribe

spot_imgspot_img

Popular

More like this
Related

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ...

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಮೂಸಂಬಿ ಜ್ಯೂಸ್​​ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ? ಮೂಸಂಬಿ ಹಣ್ಣು ಯಾವ...

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...