ಹಾಸನ: ಎಚ್ ಡಿ ರೇವಣ್ಣ ಕುಟುಂಬಕ್ಕೆ ಸಾಲು ಸಾಲು ಕಂಟಕಗಳು ಎದುರಾಗ್ತಾಲೇ ಇವೆ. ರೇವಣ್ಣ ಹಾಗು ಪ್ರಜ್ವಲ್ ಹಿಂದೆಯೇ ಸೂರಜ್ ರೇವಣ್ಣ ಕೂಡ ಜೈಲು ಸೇರುವಂತಾಗಿದೆ. ಅಸಹಜವಾಗಿ ಸಲಿಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಜೂ.21ರಂದು ಸೂರಜ್ ಪರವಾಗಿ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕನೇ ಈಗ ಸೂರಜ್ ವಿರುದ್ಧವಾಗಿ ದೂರು ನೀಡಿದ್ದಾನೆ.
ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506ರಡಿ ಎಫ್ಐಆರ್ ದಾಖಲಾಗಿದೆ. ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ವಿರುದ್ಧ ಮತ್ತೊಂದು FIR
Date: