ಚಾಮರಾಜನಗರ: ಮುಡಾ ಹಗರಣ ಎಂದೇ ಸಾಬೀತಾಗಿಲ್ಲ. ಸಿಬಿಐಗೆ ಏಕೆ ಕೊಡಬೇಕು?. ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ?. ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಕೆಲಸ ಮಾಡಿದ್ದಾರೆ. ಅವರೆಷ್ಟು ಸಿಬಿಐಗೆ ಕೊಟ್ಟಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ, ಹಗರಣ ಎಂದೇ ಸಾಬೀತಾಗಿಲ್ಲ. ಸಿಬಿಐಗೆ ಏಕೆ ಕೊಡಬೇಕು?.
ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ?. ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಕೆಲಸ ಮಾಡಿದ್ದಾರೆ. ಅವರೆಷ್ಟು ಸಿಬಿಐಗೆ ಕೊಟ್ಟಿದ್ದಾರೆ ಎಂದರು.ಇನ್ನೂ ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಮಾತನಾಡಿ, ಡಿಕೆಶಿ ಬೆಂಗಳೂರು ನಗರಾಭಿವೃದ್ಧಿ ಸಚಿವರು. ಅವರು ನಿರ್ಧಾರ ತೆಗೆದುಕೊಂಡ ಬಳಿಕ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಮುಡಾ ಹಗರಣ ಎಂದೇ ಸಾಬೀತಾಗಿಲ್ಲ. ಸಿಬಿಐಗೆ ಏಕೆ ಕೊಡಬೇಕು?: ಬೈರತಿ ಸುರೇಶ್
Date: