ಬೆಂಗಳೂರು: ಸಚಿವ ಬೈರತಿ ಸುರೇಶ್ ಅವರಿಂದಲೇ ಹಗರಣದ ಕಡತ ತಿದ್ದಿರುವ ಗುಮಾನಿ ಇದೆ. ಎಲ್ಲಾ ಕಡತಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತಮ್ಮ ಕುರ್ಚಿ ಇನ್ನು ಜಾಸ್ತಿ ದಿನ ಉಳಿಯೋದಿಲ್ಲ ಎಂದು ಗ್ಯಾರೆಂಟಿ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ,
ಅಧಿಕಾರದ ಕಡೆಯ ದಿನಗಳಲ್ಲಿ ಯದ್ವಾತದ್ವಾ ಲೂಟಿ ಮಾಡಿ ಮಗನ ಭವಿಷ್ಯ ಭದ್ರ ಮಾಡಲು ಹೊರಟಿದ್ದಾರೆ. ಬರೋಬ್ಬರಿ 4,000 ಕೋಟಿ ಮೊತ್ತದ ಮೈಸೂರಿನ ಮುಡಾ ಹಗರಣ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭ್ರಷ್ಟಾಚಾರವಾಗಿದ್ದು ಸಿಎಂ ಸಿದ್ದರಾಮಯ್ಯ ರಾಜ್ಯದ ಅತ್ಯಂತ ಕಡು ಭ್ರಷ್ಟ ಸಿಎಂ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೈರತಿ ಸುರೇಶ್ʼರಿಂದಲೇ ಹಗರಣದ ಕಡತ ತಿದ್ದಿರುವ ಗುಮಾನಿ ಇದೆ: ಆರ್.ಅಶೋಕ್
Date: