ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ ಹಣ ಕಳ್ಳತನ ಮಾಡಲಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಒಂದೇ ದಿನ ಬೆಳ್ಳಂದೂರು ಹಾಗೂ ಹೊಸೂರಿನಲ್ಲಿ ಕಳ್ಳತನ ನಡೆದಿದೆ. ಬೆಡ್ಶೀಟ್ ಸುತ್ತಿಕೊಂಡು ಬಂದು ಆರೋಪಿಗಳು ಕೃತ್ಯ ಎಸಗಿದ್ದಾರೆ. ಸಿಸಿ ಕ್ಯಾಮರಾಗೆ ಕಪ್ಪು ಸ್ಪ್ರೇ ಹೊಡೆದು ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ್ದಾರೆ. ಬೆಳ್ಳಂದೂರಿನ ಎಟಿಎಂ ಒಂದರಲ್ಲೇ 16,56,800 ನಗದು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊರ ರಾಜ್ಯದಿಂದ ಬಂದು ಕೃತ್ಯ ಎಸಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಬೆಂಗಳೂರಿನಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ ಹಣ ಕಳ್ಳತನ.!
Date: