ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿ ವಿಚಾರದಲ್ಲಿ ಮಾತಾನಾಡುವುದಕ್ಕೆ ಹೋದರೆ ಫಂಡಾರಸ್ ಬಾಕ್ಸ್ ಇದ್ದ ಹಾಗೆ. ಯಾರೂ ಸಹ ಅದರಿಂದ ಹೊರಗೆ ಇಲ್ಲ.
ಬಹುತೇಕ ರಾಜಕಾರಣಿಗಳು ಭೂಮಿ ವಿಚಾರದಿಂದ ಹೊರಗಿಲ್ಲ. ಒಂದಲ್ಲ ಒಂದು ರೀತಿ ಅದರೊಳಗೇ ಇದ್ದಾರೆ. ಅಷ್ಟು ಸುಲಭವಾಗಿ ಮುಡಾ ಅಂತ ಅದನ್ನು ಮುಚ್ಚಿ ಹಾಕಲು ಆಗುವುದಿಲ್ಲ. ಭೂಮಿ ಎನ್ನುವುದು ಕೂಲಂಕಷವಾಗಿ ನೋಡಿದ್ರೆ ಗೊತ್ತಾಗುತ್ತದೆ ಚರ್ಚೆಯೇ ಆಗುವುದಿಲ್ಲ ಎಂದರು. ವಾಲ್ಮೀಕಿ ನಿಗಮದಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ.
ಸಮುದಾಯಕ್ಕೆ ಅನ್ಯಾಯ ಆಗಬಾರದು. ವಾಲ್ಮೀಕಿ ಸಮಾಜ ಮುಂದೆ ಬರುವುದೇ ಕಷ್ಟ, ಎಂದು ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ರೆ ಸಹಿಸಲು ಸಾಧ್ಯವಿಲ್ಲ. ಸಾಕ್ಷಿ ಸಮೇತ ತಪ್ಪು ಹೊರ ಬಂದರೆ ನಾವೂ ಸಹ ಚರ್ಚೆ ಮಾಡಲು ತಯಾರಿದ್ದೇವೆ. ಸಾಕ್ಷಿ ಸಮೇತ ಹೊರ ಬರಬೇಕು. ವಾಲ್ಮೀಕಿ ಸಮುದಾಯ ಸೇರಿ ಯಾವುದೇ ದುರ್ಬಲ ವರ್ಗಕ್ಕೆ ಅನ್ಯಾಯ ಆಗಿದ್ರೆ ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ. ಬಹಳ ಗಂಭೀರ ಆಪಾದನೆ ಇದು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ವಿಚಾರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ಅಕ್ರಮ: ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ !
Date: