ಬೆಂಗಳೂರು: ಭಾನುವಾರದ ಬಾಡೂಟ ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿದ್ದ ಬೆಂಗಳೂರಿನ ಮಟನ್ ಪ್ರಿಯರು ಬೆಚ್ಚಿ ಬಿದ್ದಾರೆ.. ಕಳಪೆ ಮಾಂಸದ ದಂಧೆ ವಿಚಾರ ತಿಳಿದು ಜನ ಶಾಕ್ ಆಗಿದ್ದಾರೆ.. ಮಟನ್ ಪ್ರಿಯರು ಹೋಟೆಲ್ ಗಳಿಗೆ ಹೋಗೋಕೆ ಭಯ ಪಡ್ತಿದ್ದಾರೆ. ಇತ್ತ ಕಳಪೆ ಮಾಂಸ ದಂಧೆ ಆರೋಪ ಕೇಳಿ ಬಂದ ಬೆನ್ನಲ್ಲೇ ಆಹಾರ ಇಲಾಖೆ ಅಲರ್ಟ್ ಆಗಿದೆ. ಘಟನೆ ಸಂಬಂಧ ಬೆಂಗಳೂರಿನ 9 ರೆಸ್ಟೋರೆಂಟ್, ಹೋಟೆಲ್ ಗಳಿಗೆ ನೋಟಿಸ್ ಜಾರಿ ಮಾಡಿದೆ.
9 ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಾಗಲೆ ಇಬ್ಬರು ವಿಚಾರಣೆಗೆ ಹಾಜರಾಗಿದ್ದು, ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಅಬ್ದಲ್ ರಜಾಕ್ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರವೂ ಕೂಡ ಅಬ್ದುಲ್ ರಜಾಕ್ ವಿಚಾರಣೆ ಹಾಜರಾಗಲಿದ್ದಾರೆ.