ಬೆಂಗಳೂರು: ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನೋಡಿ ಕಾಂಗ್ರೆಸ್ ನಿದ್ದೆ ಹಾಳಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಮೈಸೂರು ಚಲೋ ಪಾದಯಾತ್ರೆಯ ಉದ್ಘಾಟನೆ ವೇಳೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನೋಡಿ ಕಾಂಗ್ರೆಸ್ ನಿದ್ದೆ ಹಾಳಾಗಿದೆ. ಡಾ. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆಯಸ್ಸು ಮುಗಿದು ಹೋಗುತ್ತದೆ ಎಂದು ನಮ್ಮ ಸ್ನೇಹಿತರು ಹೇಳಿದ್ದಾರೆ.
ಆದರೆ ಮಂಜುನಾಥ್ ಮೈಯಲ್ಲಿ ರಾಜಕೀಯ ರಕ್ತ ಹರಿಯುತ್ತಿದೆ. ರಾಮನಗರ ಜಿಲ್ಲಾಧಿಕಾರಿಯವರೇ ಸೋತ ಅಭ್ಯರ್ಥಿಯನ್ನು ಕೂರಿಸಿಕೊಂಡು ಏನೇನು ಮಾಡಿದ್ದೀರಿ, ಏನೇನು ಸೂಚನೆ ಕೊಟ್ಟಿದ್ದೀರಿ. ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಬಹಳ ಸಮಯ ಇಲ್ಲ, ಇದಕ್ಕೆಲ್ಲ ಬೆಲೆ ತೆರಬೇಕಾಗುತ್ತದೆ. ಕಾನೂನುಬಾಹಿರ ಚಟುವಟಿಕೆ ನಡೆದರೆ ತಕ್ಕ ಪಾಠ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ರಾಮನಗರ ಶಾಸಕ ಮತ್ತು ನೀವು ಕೋಡಿಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಒಡೆದು ರಫ್ತು ಮಾಡುತ್ತಿದ್ದೀರಿ. ನೊಣವಿನಕೆರೆ ಅಜ್ಜಯ್ಯ ಏನಾದರೂ ನಿಮಗೆ ಕೊನೆಯ ಹಂತಕ್ಕೆ ಬಂದಿದ್ದೀಯಾ ಅಂತಾ ಹೇಳಿದ್ದಾರಾ ಕನಕಪುರದಲ್ಲಿ ಎಷ್ಟು ಕುಟುಂಬ ಹಾಳು ಮಾಡಿದ್ದೀರಿ ಡಿಕೆ ಶಿವಕುಮಾರ್ ಅವರೇ. ಡಿಕೆ ಶಿವಕುಮಾರ್ ಅವರೇ ಅಜ್ಜಯ್ಯನ ಮೇಲೆ ಗೌರವ ಇದ್ದರೆ, ಪ್ರಮಾಣ ಮಾಡಿ, ನಾನೂ ಮಾಡುತ್ತೇನೆ ಯಾರು ಪ್ರಾಮಾಣಿಕರು ಅಂತ ಗೊತ್ತಾಗುತ್ತೆ. ಇಂದಿನಿಂದ ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಶಾಪ ಪ್ರಾರಂಭವಾಗಿದೆ. ಇನ್ಮುಂದೆ ಅಜ್ಜಯ್ಯ ಕೂಡ ಅವರಿಗೆ ರಕ್ಷಣೆ ಕೊಡಲ್ಲ ಎಂದು ಹೇಳಿದರು.
ಇಂದಿನಿಂದ ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಶಾಪ ಪ್ರಾರಂಭ !
Date: