ಬೆಂಗಳೂರು: ಕಾಲೇಜು ಯುವತಿಯರೇ ಎಚ್ಚರ..ಎಚ್ಚರ ಹೌದು ಮೊದ ಮೊದಲು ಒಳ್ಳೆಯವರಂತೆ ನಟಿಸಿ ಸ್ನೇಹಿತರಾಗ್ತಾರೆ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗ್ತಾರೆ. ಹೋಗ್ತಾ ಹೋಗ್ತಾ ನಿಮ್ಮ ಸೀಕ್ರೆಟ್ ಎಲ್ಲವನ್ನು ತಿಳಿದುಕೊಳ್ತಾರೆ. ನಿಮ್ಮ ಸ್ನೇಹಿತರ ಜೊತೆ ಇರುವ ಫೋಟೊ ತೆಗದು ಬ್ಲಾಕ್ ಮೇಲ್ ಮಾಡ್ತಾರೆ. ಇದಲ್ಲಾ ಘಟನೆ ನಡೆದಿದ್ದು, ಸಿಲಿಕಾನ್ ಸಿಟಿಯಲ್ಲಿ ಹೌದು ಕಾಲೇಜು ಯುವತಿಯ ಜೊತೆ ಸ್ನೇಹ ಬೆಳೆಸಿ ಆಪ್ತನಾಗಿ ಅವಳ ಸೀಕ್ರೆಟ್ಗಳನ್ನು ತಿಳಿದುಕೊಂಡು ಬಳಿಕ ಅವರಿಗೆಯೇ ಬ್ಲಾಕ್ ಮೇಲ್ ಮಾಡಿ ಚಿನ್ನ, ಹಣ ವಸೂಲಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೇಜಸ್ (19 ) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ತೇಜಸ್ ಮೊದ ಮೊದಲು ಒಳ್ಳೆಯವನಂತೆ ನಟಿಸಿ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗ್ತಿದ್ದ. ಹೋಗ್ತಾ ಹೋಗ್ತಾ ಯುವತಿಯ ಸೀಕ್ರೆಟ್ ಎಲ್ಲವನ್ನೂ ತಿಳಿದುಕೊಂಡಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ತೆಗೆದು ಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದ. ಸ್ನೇಹಿತನ ಜೊತೆಗಿನ ಫೋಟೋವನ್ನು ನಿಮ್ಮ ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಕೆ ಹಾಕಿದ್ದ.
ಇದರಿಂದ ಹೆದರಿದ್ದ ಯುವತಿ ಮನೆಯಲ್ಲಿದ್ದ ಚಿನ್ನ ತಂದು ತೇಜಸ್ಗೆ ನೀಡಿದ್ದಳು. ಹಂತ ಹಂತವಾಗಿ ಆರೋಪಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾನೆ. ಮನೆಯಲ್ಲಿ ಯುವತಿ ತಾಯಿ ನೋಡಿದಾಗ ಚಿನ್ನಾಭರಣ ಕಾಣೆಯಾಗಿದ್ದು ಗೊತ್ತಾಗಿದೆ. ಮಗಳನ್ನು ವಿಚಾರಿಸಿದಾಗ ಎಲ್ಲವನ್ನು ಹೇಳಿದ್ದಾಳೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಯುವತಿ ತಾಯಿ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.