ಲಾಲ್ ಬಾಗ್ ಫ್ಲವರ್ ಶೋಗೆ CM ಸಿದ್ದರಾಮಯ್ಯ ರಿಂದ ಚಾಲನೆ: ಇಂದಿನಿಂದ ಸಸ್ಯಕಾಶಿಯಲ್ಲಿ ಹೂವಿನ ಕಲರವ!

Date:

 

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರು ಇಂದು ಲಾಲ್ ಬಾಗ್ ಫ್ಲವರ್ ಶೋಗೆ ಚಾಲನೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಲಾಲ್​ಬಾಗ್​ನ ಗಾಜಿನಮನೆಯಲ್ಲಿ ಫ್ಲವರ್​ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ.

ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮರಾಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.‌

ಪ್ಲವರ್ ಶೋ‌ನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಒಂದೇ ಸ್ಥಳದಲ್ಲಿ ಜನರನ್ನ ಮೋಡಿ ಮಾಡುತ್ತಿದ್ದು, ಒಟ್ಟು 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಫ್ಲವರ್ ಶೋಗೆಂದೆ ಆಂಧ್ರ, ಊಟಿ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೂಗಳು ಬಂದಿದ್ದು, ಲಾಲ್ ಬಾಗ್​ನ ಗಾಜಿನ ಮನೆಯಲ್ಲಿ ಮೋಡಿ ಮಾಡಿವೆ.

ಫ್ಲವರ್ ಶೋ ನಲ್ಲಿ ಆಂಥೋರಿಯಂ, ಲಿಲ್ಲಿ, ಆರ್ಕಿಡ್‌, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ಅಗಪಾಂಥಸ್‌, ಸುಗಂಧ ರಾಜ ಸೇರಿದಂತೆ 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಕೊಳ್ಳಲಾಗಿದೆ. ಸುಮಾರು 8 ಲಕ್ಷ ಹೂಗಳು ಹೊರ ರಾಜ್ಯಗಳಿಂದ ಬಂದಿವೆ.

Share post:

Subscribe

spot_imgspot_img

Popular

More like this
Related

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...