ಬೆಂಗಳೂರು : ಆಂಧ್ರಪ್ರದೇಶದ DCM, ಜನಸೇವಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.
ಈ ವೇಳೆ, ಸಚಿವರಾದ ಜಮೀರ್ ಅಹಮದ್‌ರನ್ನು ಕೂಡ ನಟ ಭೇಟಿಯಾಗಿದ್ದಾರೆ. ಡಿಸಿಎಂ ಆಗಿ ರಾಜಕೀಯ ಬ್ಯುಸಿಯಿರುವ ಪವನ್ ಕಲ್ಯಾಣ್ ಓಜಿ, ಹರಿ ಹರ ವೀರ ಮಲ್ಲು, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಪವನ್ ಕಲ್ಯಾಣ್ ಕೈಯಲ್ಲಿವೆ.