ನಾಗಚೈತನ್ಯ ನಟಿ ಸೋಭಿತಾ ಈಗ ಅಫೀಶೀಯಲ್ ಜೋಡಿ !

Date:

ಬರೋಬ್ಬರಿ 4 ವರ್ಷಗಳ ದಾಂಪತ್ಯ ಜೀವನದ ಬಳಿಕ ಸೌತ್ ಇಂಡಿಯಾ ಸ್ಟಾರ್ ಹೀರೋಯನ್ ನಟಿ ಸ್ಯಾಮ್, ತೆಲುಗು ಸೂಪರ್ ಹೀರೋ ನಾಗಚೈತನ್ಯ ಡಿವೋರ್ಸ್ ತೆಗೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ 2021 ಅಕ್ಟೋಬರ್ 2ನೇ ತಾರೀಕಿನಂದು ಇಬ್ಬರು ದೂರ ಆಗುವುದಾಗಿ ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೂ ಫ್ಯಾನ್ಸ್ ಇಬ್ಬರು ಒಂದಾಗಲಿ ಅನ್ನೋ ಇಂಗಿತ ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ಈ ಮಧ್ಯೆ ಸ್ಯಾಮ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ.


ಟಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಅಕ್ಕಿನೆನಿ ನಾಗ ಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಬೆನ್ನಲ್ಲೇ ಸಾಕಷ್ಟು ರೂಮರ್ಸ್ ಕ್ರಿಯೇಟ್ ಆಗಿದ್ದವು. ಇದೀಗ ಸೂಪರ್ ಸ್ಟಾರ್ ಅಕ್ಕಿನೆನಿ ನಾಗರ್ಜುನ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಇಂದು ಹೈದರಾಬಾದ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ನಟನ ಜೊತೆ ವೆಕೇಶನ್ಗೂ ಹೋಗಿದ್ದರು. ಇನ್ನೇನು ಮದುವೆ ಆಗ್ತಾರೆ ಎಂಬ ಗುಸುಗುಸ ಚರ್ಚೆ ಹಬ್ಬಿತ್ತು. ಈ ಬೆನ್ನಲ್ಲೇ ನಾಗ ಚೈತನ್ಯ ನಟಿ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

Share post:

Subscribe

spot_imgspot_img

Popular

More like this
Related

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...