ಬೆಂಗಳೂರು: ಬ್ಯಾಡ್ ನ್ಯೂಸ್ ಭೀತಿಯಲ್ಲಿದ್ದ ಬೆಂಗಳೂರಿಗರಿಗೆ ಜಲಮಂಡಳಿ ಗುಡ್ ನ್ಯೂಸ್ ನೀಡೋಕೆ ಪ್ಲಾನ್ ಮಾಡಿಕೊಂಡಿದೆ. ಬಿಬಿಎಂಪಿಯ ಭರ್ಜರಿ ಆಫರ್ ನಂತರ ಇದೀಗ ಜಲಮಂಡಳಿ ಕೂಡ ಆಫರ್ ನೀಡೋಕೆ ರೆಡಿ ಆಗಿದೆ. ಬಾಕಿ ಬಿಲ್ ಪಾವತಿಗೆ ಬಿಬಿಎಂಪಿ ಅದೆಷ್ಟು ಸರ್ಕಸ್ ಮಾಡಿದ್ರು ವರ್ಕ್ ಔಟ್ ಆಗಿರಲಿಲ್ಲ. ಸಂಚಾರಿ ಪೊಲೀಸರು ದಂಡ ವಸೂಲಿಗಾಗಿ ಮಾಡಿದ್ದ ಒನ್ ಟೈಮ್ ಸೆಟಲ್‍ಮೆಂಟ್ ಯೋಜನೆಯನ್ನ ಫಾಲೊ ಮಾಡಿತು. ಇದೀಗ ಅದೇ ಪ್ಲಾನ್ ನ್ನು ಫಾಲೋ ಮಾಡೋಕೆ ಜಲಮಂಡಳಿ ಕೂಡ ರೆಡಿಯಾಗ್ತಿದೆ.
ನೀರಿನ ದರ ಏರಿಕೆ ಕೂಡ ಶೀಘ್ರದಲ್ಲೇ ಆಗಬಹುದು ಅನ್ನೋ ಚರ್ಚೆ ನಗರ ವಾಸಿಗಳನ್ನ ಆತಂಕಕ್ಕೆ ದೂಡಿತ್ತು. ಈ ಮಧ್ಯೆಯೂ ಜಲ ಮಂಡಳಿ ನಗರದ ಜನರಿಗೆ ಸಿಹಿ ಸುದ್ದಿ ನೀಡೋ ಪ್ಲ್ಯಾನ್ ಮಾಡ್ತಿದೆ. ಈ ಮೂಲಕ ನಗರದಲ್ಲಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವವರಿಗೆ ಆಫರ್ ಒಂದನ್ನ ನೀಡೋಕೆ ಜಲಮಂಡಳಿ ಮುಂದಾಗಿದ್ದು, ಕೋಟ್ಯಾಂತರ ರೂಪಾಯಿ ಬಾಕಿ ಹಣ ವಸೂಲಿ ಜೊತೆಗೆ, ಜನರ ಮೇಲಿನ ಸಾಲದ ಹೊರೆಯನ್ನು ಕೂಡ ತಗ್ಗಿಸೋಕೆ ಚಿಂತನೆ ನಡೆಸಿದೆ.
ಜಲಮಂಡಳಿ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ, ಎಲ್ಲಾ ಸೇರಿ ಸುಮಾರು 600 ಕೋಟಿಗೂ ಅಧಿಕ ಬಾಕಿ ಬಿಲ್ ಪಾವತಿಯಾಗಬೇಕಿದೆ. ಈಗಾಗಲೇ ಬಿಲ್ ಬಾಕಿ ಇರುವವರಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ರು ಬಾಕಿಮಾತ್ರ ವಾಪಸ್ ಬರ್ತಿಲ್ಲ. ಇದೇ ಕಾರಣಕ್ಕೆ ೫೦% ಆಫರ್ ಅಥವಾ ದಂಡ, ಬಡ್ಡಿ ಇಲ್ಲದಂತೆ ಓನ್ ಟೈಂ ಸೆಟ್ಲಮೆಂಟ್ ಆಫರ್ ಕೊಡುವ ಯೋಜನೆಗಾಗಿ ಪ್ಲ್ಯಾನ್ ಸಿದ್ದಪಡಿಸುತ್ತಿದೆ.