ಜಿರಳೆ, ಹಲ್ಲಿ, ನೊಣ ಕಾಟವೇ!?, ಹಾಗಿದ್ರೆ, ಮನೆಯ ಚಾವಡಿಯಲ್ಲಿ ಈ ಹಣ್ಣಿನ ಸಿಪ್ಪೆ ಇಡಿ!

Date:

 

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಜಿರಳೆ, ಹಲ್ಲಿ, ನೊಣ ಕಾಟವೇ ಹೆಚ್ಚು. ಹೀಗಾಗಿ ಇದನ್ನು ಹೋಗಲಾಡಿಸಲು ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್ ನಿಮಗಾಗಿ.

ಮನೆಯಲ್ಲಿ ಇರುವೆ, ಸೊಳ್ಳೆ, ನೊಣ, ಹಲ್ಲಿ ಮತ್ತು ಜಿರಳೆ ಕಾಟ ಹೆಚ್ಚಾಗಿದ್ದರೆ, ಕಿತ್ತಳೆ ಸಿಪ್ಪೆಯನ್ನು ನೈಸರ್ಗಿಕ ದೋಷ ನಿವಾರಕವಾಗಿ ಬಳಸಬಹುದು. ಒಣಗಿದ ಕಿತ್ತಳೆ ಸಿಪ್ಪೆ ಮತ್ತು ನೀರಿನ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ ಸಿಂಪಡಿಸಿದರೆ ಸಾಕು. ಇನ್ನು ಇನ್ನೊಂದು ವಿಧದಲ್ಲಿ ಬಳಕೆ ಮಾಡುವುದಾದರೆ, ಹಸಿ ಸಿಪ್ಪೆಯನ್ನು ಮನೆಯ ಒಂದು ಮೂಲೆಯಲ್ಲಿಟ್ಟರೆ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಅಡುಗೆ ಮನೆಯಲ್ಲಿನ ಸಿಂಕ್ ವಾಸನೆ ಬರುತ್ತಿದ್ದರೆ, ಚಿಟಿಕೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ, ಸಿಂಕ್‌ʼನಲ್ಲಿ ಸಂಗ್ರಹವಾಗಿರುವ ಕೊಳೆಯ ಮೇಲೆ ಸಿಂಪಡಿಸಿ. ನಂತರ ಅದನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ಅನುಸರಿಸಿದ್ರೆ ವಾಸನೆ ಹೋಗುತ್ತದೆ.

ಇನ್ನು ವಿನೆಗರ್ ಮತ್ತು ಕಿತ್ತಳೆ ಸಿಪ್ಪೆಯನ್ನು ಬಳಸಿ ನೀವು ಸೋಂಕುನಿವಾರಕ ಪರಿಸರ ಸ್ನೇಹಿ ಕ್ಲೀನರ್ ಅನ್ನು ತಯಾರಿಸಬಹುದು. ಇದರಿಂದ ಸ್ವಚ್ಛತೆ ಉತ್ತಮವಾಗಿರುತ್ತದೆ.

ಸ್ಟೇನ್‌ ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಬಿಸಿ ಎಣ್ಣೆಯ ಕಲೆಗಳು ಅಂಟಿಕೊಂಡಿದ್ದರೆ ಅದನ್ನು ತೆಗೆದುಹಾಕಲು ಕಿತ್ತಳೆ ಸಿಪ್ಪೆಯನ್ನು ಕ್ಲೀನರ್ ಆಗಿ ಬಳಸಬಹುದು.

ಇನ್ನು ಆರೋಗ್ಯದ ವಿಚಾರಕ್ಕೆ ಬರುವುದಾದರೆ, ಕಿತ್ತಳೆಯಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿ. ದೇಹದಲ್ಲಿನ ಫೈಬರ್ ಮತ್ತು ವಿಟಮಿನ್ ಸಿ ಕೊರತೆಯನ್ನು ನಿವಾರಿಸುತ್ತದೆ. ಅಂತೆಯೇ, ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಕಿತ್ತಳೆ ಸಿಪ್ಪೆಯಲ್ಲಿ ಕಂಡುಬರುತ್ತದೆ. ಇದು ಕೊಬ್ಬನ್ನು ಸುಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಸಿಪ್ಪೆಯಿಂದ ಚರ್ಮದಲ್ಲಿರುವ ಕಪ್ಪು ಚುಕ್ಕೆಗಳು, ಸತ್ತ ಜೀವಕೋಶಗಳು, ಮೊಡವೆಗಳು ಅಥವಾ ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಬಹುದು. ಇದರ ಸಿಪ್ಪೆಯ ಪುಡಿಯನ್ನು ಹಾಲು ಅಥವಾ ಮೊಸರಿನೊಂದಿಗೆ ಬೆರೆಸಿ ಬಳಸಿದರೆ ಒಳ್ಳೆಯದು.

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಪ್ರಮಾಣವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲ. ಕೂದಲಿನ ಆರೋಗ್ಯಕ್ಕಾಗಿಯೂ ಬಳಸಬಹುದು. ಕಂಡೀಷನರ್ ಅನ್ನು ತಯಾರಿಸಿ ಹಚ್ಚುವುದರಿಂದ, ಕೂದಲು ಮೃದು, ನಯವಾದ ಮತ್ತು ಬಲವಾಗಿರುತ್ತದೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...