TNIT ಮೀಡಿಯಾ ಅವಾರ್ಡ್ ಸತತ 6 ವರ್ಷಗಳಿಂದ ಕರ್ನಾಟಕದ ಸುದ್ದಿ ಮಾಧ್ಯಮಗಳಿಗೆ ಪ್ರಶಸ್ತಿ ಕೊಡುತ್ತಾ ಬರಲಾಗುತ್ತಿದೆ. ಈ ಬಾರಿ 7 ನೇ ವರ್ಷವಾದ್ದರಿಂದ ವಿಶೇಷ, ವಿನೂತನವಾಗಿ ನಿಮ್ಮ ಮುಂದೆ ಬಂದು ನಿಂತಿದೆ. ಅರ್ಥಾತ್ ಈ ಬಾರಿ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಮಾಡಲಾಗ್ತಿದೆ. ಪ್ಯಾಲೇಸ್ ಗ್ರಾಂಡ್ ಕಿಂಗ್ ಕೊರ್ಟ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, 4 ರಾಜ್ಯಗಳ ಸುದ್ದಿ ಮಾಧ್ಯಮದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 40 ಅಧಿಕ ಚಾನಲ್ ಗಳು ಮತ್ತು 20 ಕ್ಕೂ ಅಧಿಕ ಕೆಟಗರಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಅಷ್ಟೇ ಅಲ್ಲದೆ ರಾಜಕೀಯ ಗಣ್ಯರು ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಿಂದ TNIT ಮೀಡಿಯಾ ಎಂಡಿ ರಘು ಭಟ್ ಹಾಗೂ ತಂಡ ಕಾರ್ಯಕ್ರಮದ ತಯಾರಿ ನಡೆಸಿಕೊಂಡು ಬಂದಿದ್ದು, ರಘು ಭಟ್ ಅವರ ಕನಸಿನ ಕೂಸು ಇಂದು ನನಸಾಗಿ ಅರಮನೆ ಮೈದಾನದಲ್ಲಿ ಕಂಗೊಳಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಆಂದ್ರ ಪ್ರದೇಶ, ತಮಿಳುನಾಡು, ಕೇರಳ ಸುದ್ದಿವಾಹಿನಿಯನ್ನ ಕಾರ್ಯಕ್ರಮ ಆಹ್ವಾನಿಸಲಾಗಿದೆ. ಇದು ಅಷ್ಟು ಸುಲಭದ ಮಾತಲ್ಲ. ಹಗಲು ರಾತ್ರಿ ಎನ್ನದೆ TNIT ಮೀಡಿಯಾ ಎಂಡಿ ರಘು ಭಟ್ ಆ್ಯಂಡ್ ಟೀಂ ಸಾಕಷ್ಟು ಶ್ರಮವಹಿಸಿದೆ.
ಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ಸಿರಿ ಕನ್ನಡ Entertainment partner ಆದ್ರೆ, 92.7 Big FM ನವರಿ Radio Partner. ಹಾಗೇ MSIL, ಕನ್ನಡ ಮತ್ತು ಸಂಸ್ಕತಿ ಇಲಾಖೆ, KMF ನಂದಿನಿ ಗೋಲ್ಡ್ ವಿಂಗ್ಸ್, ಚಾಕ್ಲೇಟ್ ಜಂಕ್ಷನ್, ಅಭಯಾ ಗೋಲ್ಡ್ ಬೈಯರ್ಸ್, ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಇನ್ನೂ ಮಾಧ್ಯಮದ ಸಪೋರ್ಟ್ ವಿಚಾರಕ್ಕೆ ಬಂದ್ರೆ ರಂಗನಾಥ್ ಭಾರದ್ವಾಜ್, ನ್ಯೂಸ್ ಫಸ್ಟ್ ರವಿಕುಮಾರ್, ಮಾರುತಿ, ಜೆಪಿ ಶೆಟ್ಟಿ, ಗಣೇಶ ಕಾಸರಗೋಡು, ಸದಾಶಿವ ಶಣೈ , ಕಿರಿಕ್ ಕೀರ್ತಿ, ರಾಕೇಶ್ ಶೆಟ್ಟಿಸೇರಿದಂತೆ ಹಲವಾರು ದಿಗ್ಗಜರು ಬೆಂಬಲಿಸಿ ಪ್ರೋತ್ಸಾಹ ನೀಡಿ ಮುನ್ನೆಡಸಿದ್ದಾರೆ.
ಒಟ್ಟಾರೆ ಇಂದು ನಡೆಯುವ ಕಾರ್ಯಕ್ರಮ TNIT ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯುವ ವಿಚಾರವೆಂದರೆ ತಪ್ಪಾಗಲಾರದು. ಮಾಧ್ಯಮಗಳ ಇತಿಹಾಸದಲ್ಲಿ ಇಂತಹ ಪ್ರಶಸ್ತಿ ಪ್ರಧಾನ ಸಮಾರಂಭವನ್ನ TNIT ಮೀಡಿಯಾ ಮಾತ್ರ ಮಾಡುತ್ತಿದೆ ಅನ್ನುವುದೆ ಹೆಮ್ಮೆಯ ವಿಚಾರ.