7 ನೇ ವರ್ಷದ TNIT ಮೀಡಿಯಾ ಅವಾರ್ಡ್ ಅದ್ದೂರಿಯಾಗಿ ನೆರೆವೇರಿತು. ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ವಚನಾನಂದ ಮಹಾಸ್ವಾಮಿಗಳು, ಹಿರಿಯ ನಟ ಶ್ರೀನಾಥ್, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ನಟ ನೆನಪಿರಲಿ ಪ್ರೇಮ್ , ರಿಷಭ್ ಶೆಟ್ಟಿ, ತಾರಾ ಅನುರಾಧಾ, ಆಲ್ ಓಕೆ, ವಿಜಯ ರಾಘವೇಂದ್ರ, ರವಿಕುಮಾರ್ ಸೇರಿದಂತೆ ಹಲವು ಗಣ್ಯರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ TNIT ಮ್ಯಾಗ್ಸಿನ್ ಬಿಡುಗಡೆ ಮಾಡಿದರು.
ಇನ್ನೂ ಕಾರ್ಯಕ್ರಮಕ್ಕೆ ಮೈಸೂರು-ಕೊಡಗು ಶಾಸಕ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್, ನಟ ಅನಿರುಧ್, ಮೇಘನಾ ಗಾಂವ್ಕರ್, ನಟಿ ರಾಧ್ಯಾ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
ಯಾರಿಗೆ ಯಾವೆಲ್ಲ ಅವಾರ್ಡ್ ಸಿಕ್ಕಿದೆ ಅನ್ನೊದನ್ನ ನೋಡೊದಾದ್ರೆ..
ಕನ್ನಡ ಮಾಧ್ಯಮಕ್ಕೆ TNIT ಉತ್ತಮ ಕೊಡುಗೆ ಶಶಿಧರ್ ಭಟ್ , ವರ್ಷದ ಫೈರ್ ಬ್ರ್ಯಾಂಡ್ ಪತ್ರಕರ್ತ ರಾಕೇಶ್ ಶೆಟ್ಟಿ , ಜೀವಮಾನ ಸಾಧನೆ ಪ್ರಶಸ್ತಿ ಮಂಜುಳಾ ಕೃಷ್ಣಕುಮಾರ್, ಅತ್ಯುತ್ತಮ ಸ್ಮರಣೀಯ ನಿರೂಪಕ ಪ್ರಕಾಶ್ ಕುಮಾರ್ ಸಿ.ಎನ್, TNIT ಕನ್ನಡ ಪತ್ರಿಕೋದ್ಯಮದ ಐಕಾನ್ ರಾಧಾ ಹಿರೇಗೌಡರ್, TNIT ಕರ್ನಾಟಕದ ಹೆಮ್ಮೆ ಅಪರ್ಣಾ ವಸ್ತಾರೆ, ಆಂಕರಿಂಗ್‌ನಲ್ಲಿ ಅತ್ಯುತ್ತಮ ನಿರೂಪಕ ಹರೀಶ್ ನಾಗರಾಜು, ಆಂಕರಿಂಗ್‌ನಲ್ಲಿ ಅತ್ಯುತ್ತಮ ಶ್ರೇಷ್ಠ ನಿರೂಪಕಿ ಶ್ವೇತಾ ಆಚಾರ್ಯ, ವರ್ಷದ ಅತ್ಯುತ್ತಮ ಸಂಪಾದಕೀಯ ಪರಶುರಾಮ್ ಡಿ , ವರ್ಷದ ಅತ್ಯುತ್ತಮ ಚಾನೆಲ್ ಟಿವಿ 9 ಕನ್ನಡ , ವೇಗವಾಗಿ ಬೆಳೆಯುತ್ತಿರುವ ಚಾನಲ್ R.ಕನ್ನಡ,ವರ್ಷದ ಅತ್ಯುತ್ತಮ ಜ್ಯೋತಿಷಿ ಆನಂದ್ ಗುರೂಜಿ, ಅತ್ಯುತ್ತಮ ತನಿಖಾ ಪತ್ರಕರ್ತ ಸುನೀಲ್ ಧರ್ಮಸ್ಥಳ, (R.ಕನ್ನಡ) TNIT ವರ್ಷದ ವಿಶೇಷ ಆಂಕರ್ ಶ್ರುತಿ ಕಿತ್ತೂರು ಗಣರಾಜ್ಯ ಕನ್ನಡ ಅತ್ಯುತ್ತಮ ನಿರೂಪಕ ರಂಜಿತ್ ಶಿರಿಯಾರ್ (ಆರ್. ಕನ್ನಡ) ಮತ್ತು ಅತ್ಯುತ್ತಮ ನಿರೂಪಕ ವಸಂತ್ ಕುಮಾರ್(ಪ್ರಜಾ ಟಿವಿ), ಅತ್ಯುತ್ತಮ ನಿರೂಪಕಿ ಶಕುಂತಲಾ ಎಸ್.ವಿ(ಟಿವಿ 9), ಅತ್ಯುತ್ತಮ ಚಲನಚಿತ್ರ ಪತ್ರಕರ್ತ ಯತೀಶ್ ಡಿಎಸ್ (ರಾಜ್ ನ್ಯೂಸ್) , ಅತ್ಯುತ್ತಮ ಚಲನಚಿತ್ರ ಪತ್ರಕರ್ತೆ ಮಂಗಳಾ ರಾಜಗೋಪಾಲ್ ( ಟಿವಿ 9), ಅತ್ಯುತ್ತಮ ರಾಜಕೀಯ ಪತ್ರಕರ್ತ ವಿಜಯ್ ಜೆ.ಆರ್, (R-ಕನ್ನಡ) ಅತ್ಯುತ್ತಮ ರಾಜಕೀಯ ಪತ್ರಕರ್ತ (ಪುರುಷ), ಮಂಜುನಾಥ್ ಜಿ (ನ್ಯೂಸ್ ಫಸ್ಟ್). ಅತ್ಯುತ್ತಮ ಮೆಟ್ರೋ ವರದಿಗಾರ ಅಭಿಷೇಕ್ ಬಿ.ವಿ (ವಿಸ್ತಾರ), ಅತ್ಯುತ್ತಮ ಮೆಟ್ರೋ ವರದಿಗಾರ ಕಾರ್ತಿಕ್ ನಾಯಕ್ (TV5), ಅತ್ಯುತ್ತಮ ಮೆಟ್ರೋ ಪತ್ರಕರ್ತೆ ವಿದ್ಯಾಶ್ರೀ ಬಿಎನ್ (ಸುವರ್ಣ), ಅತ್ಯುತ್ತಮ ಮೆಟ್ರೋ ಪತ್ರಕರ್ತೆ ದೀಪ್ತಿ ತೋಳ್ಪಾಡಿ (R. ಕನ್ನಡ), ಅತ್ಯುತ್ತಮ ಕ್ರೈಂ ಪತ್ರಕರ್ತ ವಿಷ್ಣು ಪ್ರಸಾದ್, ಅತ್ಯುತ್ತಮ ಕ್ರೀಡಾ ಪತ್ರಕರ್ತ ಗಂಗಾಧರ್ ಜಿಎಸ್ (ನ್ಯೂಸ್ ಫಸ್ಟ್ ಕನ್ನಡ ), ಅತ್ಯುತ್ತಮ ಕ್ಯಾಮರಾಮನ್ ನಾಗೇಶ್ ಎಂ (TV5), ಅತ್ಯುತ್ತಮ ಕ್ಯಾಮರಾಮನ್ ರಮೇಶ್ ಎಂ ಆರ್ (ಪ್ರಜಾ ಟಿವಿ), ಅತ್ಯುತ್ತಮ ವೀಡಿಯೋ ಎಡಿಟರ್ ಬಸವರಾಜ್ ದೋತಿಹಾಳ (TV5), ಅತ್ಯುತ್ತಮ ವೀಡಿಯೊ ಸಂಪಾದಕ ಆರ್.ಜಿ.ಮಧುಸೂದನ ರಾವ್, (ಸುವರ್ಣ ನ್ಯೂಸ್), ಅತ್ಯುತ್ತಮ ವೀಡಿಯೊ ಎಡಿಟರ್ ರಾಧಿಕಾ (ಪವರ್ ಟಿವಿ) , ಅತ್ಯುತ್ತಮ ವಾಯ್ಸ್ ಓವರ್ (ಪುರುಷ) ನಿತಿನ್ ಶೆಟ್ಟಿ(TV9), ಮತ್ತು ಅಶ್ವಥ್ ಹೆಗಡೆ ( ಸುವರ್ಣ ನ್ಯೂಸ್ ), ಅತ್ಯುತ್ತಮ ವಾಯ್ಸ್ ಓವರ್ (ಮಹಿಳೆ) ಪೂರ್ಣಿಮಾ ಗೌಡ, (ಪವರ್ ಟಿವಿ) ಅತ್ಯುತ್ತಮ ROK ಉತ್ತರ ಕರ್ನಾಟಕ ಪತ್ರಕರ್ತ ಪ್ರಕಾಶ ನೂಲ್ವಿ, (News First ) ಅತ್ಯುತ್ತಮ ROK ಪತ್ರಕರ್ತ ರಾಮ್ (ಟಿವಿ 9) TNIT ಭರವಸೆಯ ನಿರೂಪಕ (ಪುರುಷ) ವಾಸುದೇವ್ ಭಟ್ (ವಿಸ್ತಾರ ನ್ಯೂಸ್) , TNIT ಭರವಸೆಯ ನಿರೂಪಕಿ ಪವಿತ್ರ ಸೂರ್ಯವಂಶಿ (ರಾಜ್ ನ್ಯೂಸ್) , TNIT ಫೇಸ್ ಆಫ್ ದಿ ಇಯರ್ ಸಿಂಧೂರ ಗಂಗಾಧರ (ಪವರ್ ಟಿವಿ) TNIT ವರ್ಷದ ಅತ್ಯುತ್ತಮ ಕಾರ್ಯಕ್ರಮ – ನಾಯಕ (First news) ಅತ್ಯುತ್ತಮ ಪತ್ರಿಕೋದ್ಯಮ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ.