ನೀವು ಇಷ್ಟ ಪಡೋ ಹುಡುಗ ಇದ್ದಕಿದ್ದ ಹಾಗೆ ಐ ಲವ್ ಯೂ, ನನ್ನ ಮದ್ವೆ ಆಗ್ತೀರಾ ಅಂತ ಕೇಳುದ್ರೆ ನಿಮಗೆ ಒಂದು ಕ್ಷಣ ಶಾಕ್ ಆಗ್ಬೋದು.. ಇಲ್ಲ ಖುಷೀಲಿ ಕುಪ್ಪಳಿಸಿ ಆತನನ್ನ ಅಪ್ಪಿಕೊಂಡು ಮುದ್ದಾಡ್ಬೋದು.. ಆದ್ರೆ ಇಲ್ಲೊಂದು ಯುವತಿ ಅದಕ್ಕಿಂತಲೂ ಸ್ವಲ್ಪ ಎತ್ತರಕ್ಕೆ ಹೋಗಿ ಕೆಳಗೆ ಬಿದ್ದಿದ್ದಾಳೆ ಅಷ್ಟೆ..
ಅರೆ ಏನಪ್ಪಾ ಅಂತೀರಾ.. ಈ ಸ್ಟೋರಿ ಓದಿ. ಮೆಕ್ಸಿಕೋದ ಯುವತಿಯೋರ್ವಳು ತನ್ನ ಗೆಳೆಯನ ಪ್ರೇಮ ನಿವೇದನೆಗೆ ದಂಗಾಗಿ ತಲೆ ತಿರುಗಿ ಬಿದ್ದಿದದ್ದಾಳೆ ನೋಡಿ.. ಮೆಕ್ಸಿಕೋ ಮೂಲದ ಮಾಡೆಲ್ ರೆಯ್ನಾ ರೆಂಟೀರಿಯಾ ಮತ್ತು ಆಕೆಯ ಗೆಳೆಯ ಬೆನಿಟೆಸ್ ಹಲವು ತಿಂಗಳುಗಳಿಂದ ಒಬ್ಬರೊನ್ನೊಬ್ಬರು ಪ್ರೀತುಸ್ತಾ ಇದ್ರು.. ಆದ್ರೆ ಅವರಿಬ್ಬರೂ ನೇರವಾಗಿ ಎಂದೂ ಹೇಳಿಕೊಂಡಿರಲಿಲ್ಲ. ಆದ್ರೆ ಬೆನಿಟಿನ್ ತನ್ನ ಪ್ರೀತಿಯ ವಿಷಯ ಹೇಳಿಕೊಳ್ಳಲೇ ಬೇಕು ಎಂದು ನಿರ್ಧರಿಸಿ ವಾದ್ಯ ಸಂಗೀತದೊಂದಿಗೆ ಬಂದು ಉಂಗುರವಿದ್ದ ಬಾಕ್ಸ್ ಕೈಗೆ ಕೊಡುತ್ತಲೇ ಆಕೆಗೆ ಪ್ರಪೋಸ್ ಮಾಡೇ ಬಿಟ್ಟ. ಅದನ್ನು ಕೇಳುತ್ತಿದ್ದಂತೆಯೇ ರೆಯ್ನಾ ತಲೆ ತಿರುಗಿ ಬಿದ್ದಿದ್ದಾಳೆ… ಆತ ಪ್ರೇಮ ನಿವೇದನೆಯನ್ನು ಹೇಳುತ್ತಾನೆ ಎಂದು ನಾನಂದುಕೊಂಡಿರಲಿಲ್ಲ.. ಹೇಳತೀರದ ಸಂತೋಷಕ್ಕೆ ನನಗೆ ಪ್ರಜ್ಞೆಯೇ ಇಲ್ಲದಂತಾಯಿತು. ನನಗೀಗ ತುಂಬಾ ಸಂತೋಷವಾಗಿದೆ ಎಂದು ಮಾಡೆಲ್ ರೆಯ್ನಾ ಸಂತಸ ಹಂಚಿಕೊಂಡಿದ್ದಾಳೆ. ಆದರೆ ಆಕೆ ತಲೆ ತಿರುಗಿ ಬಿದ್ದ ವೀಡಿಯೋ ಮಾತ್ರ ಸಖತ್ ವೈರಲ್ ಆಗ್ಬಿಟ್ಟಿದೆ.
Video :
Like us on Facebook The New India Times
POPULAR STORIES :
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!