ಚಾಲಕನ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು!

Date:

 

ಬೆಂಗಳೂರು:- ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು‌ ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಮಧ್ಯರಾತ್ರಿ 1:30ರ ಸುಮಾರಿಗೆ ಹೈಡ್ರಾಲಿಕ್ ಏರಿಸಿಕೊಂಡು ಬಂದಿದ್ದ ಟಿಪ್ಪರ್ ಚಾಲಕ, ಲಾರಿ ಟಾಪ್‌ಗೆ ವೈರ್‌ ಸಿಕ್ಕಿಹಾಕಿಕೊಂಡಿದೆ. ಇದನ್ನೂ ಗಮನಿಸದೆ ಲಾರಿ ಚಲಾಯಿಸಿದ್ದರಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿದೆ.

ಲಾರಿಯಲ್ಲಿದ್ದ ಜಲ್ಲಿ ಹುಡಿ ಮುಖ್ಯರಸ್ತೆಯ ತುಂಬೆಲ್ಲಾ ಬಿದ್ದಿತ್ತು. ಮದ್ಯಪಾನ ಮಾಡಿ ಲಾರಿ ಚಲಾಯಿಸಿರುವ ಶಂಕೆ ಇದೆ. ಸದ್ಯ ಜೆಸಿಬಿ ಮುಖಾಂತರ ರಸ್ತೆ ತೆರವು ಮಾಡಲಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಟಿಪ್ಪರ್ ಹಾಗೂ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...