ಕಾಜೋಲ್ 1992 ರಲ್ಲಿ ‘ಬೇಖುದಿ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ತನ್ನ 30 ವರ್ಷಗಳ ಸಿನಿ ಕೆರಿಯರ್ ನಲ್ಲಿ ಈ ನಟಿ 51ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಾಜೋಲ್ 90 ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಕೂಡ ಕಾಜೋಲ್ ಗೆ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.
ತಮ್ಮ ನಟನೆಯಿಂದಲೇ ಜನಮನ ಗೆದ್ದ ನಟಿಯರು ಸಿನಿಮಾ ಲೋಕದಲ್ಲಿ ಇದ್ದಾರೆ. ಅನೇಕ ನಟಿಯರೂ ಆಕೆಯ ಸೌಂದರ್ಯದಿಂದ ಫೇಮಸ್ ಆಗ್ತಾರೆ. ಆದ್ರೆ ಕಾಜೋಲ್ ಒಬ್ಬ ನಟಿಯಾಗಿದ್ದು, ಆ ಸಮಯದಲ್ಲಿ ಆಕೆ ಫುಲ್ ಫಿಟ್ ಬಾಡಿ ಹೊಂದಿರಲಿಲ್ಲ, ಅಷ್ಟೊಂದು ಫೇರ್ ಆಗಿರಲಿಲ್ಲ. ಕಪ್ಪು ಮೈಬಣ್ಣದ ಹೊರತಾಗಿಯೂ ತನ್ನ ಪ್ರತಿಭೆಯಿಂದಲೇ ಬಾಲಿವುಡ್ ಆಳಿದ ಏಕೈಕ ನಟಿ ಅಂದ್ರೆ ಅವರು ಕಾಜೋಲ್ ಎನ್ನಬಹುದು. .
ಅಂದವಾದ ಮುಖ ಮತ್ತು ಸ್ಲಿಮ್ ಫಿಗರ್ ಎಂಬ ಸ್ಟೀರಿಯೊಟೈಪ್ ಅನ್ನು ಬಿಟ್ಟು ಸೂಪರ್ ಸ್ಟಾರ್ ಆದ ಏಕೈಕ ಬಾಲಿವುಡ್ ನಟಿ ಅಂದ್ರೆ ಅದು ಕಾಜೋಲ್ ಒಬ್ಬರೇ. ಅವರ 30 ವರ್ಷಗಳ ಸಿನಿ ಕೆರಿಯರ್ನಲ್ಲಿ, ಅವರು ಎಂದಿಗೂ ಅಸಭ್ಯವಾದ ದೃಶ್ಯಗಳನ್ನು ಮಾಡಲಿಲ್ಲ. ನನಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ ಎಂದು ಸ್ವತಃ ಕಾಜೋಲ್ ತನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ರು. ಓದುವುದನ್ನು ತಪ್ಪಿಸಿಕೊಳ್ಳಲೆಂದೆ ಕಾಜೋಲ್ ನಟನಾ ಲೋಕಕ್ಕೆ ಬರಲು ನಿರ್ಧರಿಸಿದ್ದರಂತೆ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ಆ ಚಿತ್ರವು ಅವರ ಭವಿಷ್ಯವನ್ನು ಬದಲಾಯಿಸಿತು.
ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟ ಕೂಡಲೇ ಪ್ರೇಕ್ಷಕರು ಹಾಗೂ ನಿರ್ಮಾಪಕರ ಮನ ಗೆದ್ದರು. ನಂಬರ್ ಒನ್ ನಟಿ ಎನಿಸಿಕೊಂಡ್ರು. ಶಾರುಖ್ ಖಾನ್ ಜೊತೆಗಿನ ಪ್ರತಿಯೊಂದು ಚಿತ್ರವೂ ಹಿಟ್ ಆಗಿದೆ. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುಮುಖ ನಟಿಯಾಗಿದ್ದಾರೆ.ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟ ಕೂಡಲೇ ಪ್ರೇಕ್ಷಕರು ಹಾಗೂ ನಿರ್ಮಾಪಕರ ಮನ ಗೆದ್ದರು. ನಂಬರ್ ಒನ್ ನಟಿ ಎನಿಸಿಕೊಂಡ್ರು. ಶಾರುಖ್ ಖಾನ್ ಜೊತೆಗಿನ ಪ್ರತಿಯೊಂದು ಚಿತ್ರವೂ ಹಿಟ್ ಆಗಿದೆ. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುಮುಖ ನಟಿಯಾಗಿದ್ದಾರೆ.