ಬೆಂಗಳೂರು:- ನಗರದ ಹೊರವಲಯ ನೆಲಮಂಗಲ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯ ಸೊಂಡೆಕೊಪ್ಪ ಶಾಖೆಯ ಲೈನ್ ಮೆನ್ ಒಬ್ಬ ಖಾಸಗಿ ಯೂಟ್ಯೂಬರ್ ಜೊತೆ ಸೇರಿ ತನ್ನ ಹಿರಿಯ ಅಧಿಕಾರಿ ಸಹಾಯಕ ಇಂಜಿನಿಯರ್ ಬಳಿ 50 ಲಕ್ಷ ಹಣಕ್ಕೆ ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ.
ಹೀಗಾಗಿ ಬ್ಲಾಕ್ ಮೇಲ್ ಗೆ ನೊಂದ ಬೆಸ್ಕಾಂ ಸಹಾಯಕ ಇಂಜಿನಿಯರ್ ನೆಲಮಂಗಲ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೊಂಡೆಕೊಪ್ಪ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ನಾಗರಾಜ್ ಬ್ಲಾಕ್ ಮೇಲ್ ಗೆ ನೊಂದ ಅಧಿಕಾರಿಯಾಗಿದ್ದು. ಬೆಸ್ಕಾಂ ನಲ್ಲಿ ಸಹಾಯಕ ಇಂಜಿನಿಯರ್ ನಾಗರಾಜ್ ಅವ್ಯವಹಾರ ಮಾಡುತಿದ್ದಾರೆ ಎಂದು ಸುಖಾ ಸುಮ್ಮನೆ ಅರ್ಜಿಗಳನ್ನು ಹಾಕಿ ಹೆದರಿಸಲು ಪ್ರಯತ್ನಿಸಿ ಅಲ್ಲಿನ ಲೈನ್ ಮೆನ್ ಹರೀಶ್ ಸೇರಿದಂತೆ ಇಬ್ಬರು ಸ್ಥಳೀಯ ಯೂಟ್ಯೂಬರ್ ಗಳು 50 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿ ಹಣ ಕೊಡದೆ ಇದ್ದಾಗ ಮಾರ್ಪಿಂಗ್ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಡಿಯೋ ಹರಿಬಿಟ್ಟು ತೇಜೋವದೆಗೆ ಪ್ರಯತ್ನಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಬೆಸ್ಕಾಂ ಲೈನ್ ಮೆನ್ ಹರೀಶ್, ಯೂಟ್ಯೂಬರ್ ಗಳಾದ ಬಾಲಕೃಷ್ಣ,ಮತ್ತೊಬ್ಬ ಯೂಟ್ಯೂಬರ್ ನಾಗರಾಜ್ ಎಂಬುವವರ ವಿರುದ್ಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ತನಿಖೆ ನೆಡೆಸುತ್ತಿರುವ ನೆಲಮಂಗಲ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.