ಬೆಂಗಳೂರು:- ಕಾರಾಗೃಹ ಎಡಿಜಿಯಾಗಿ ಟಫ್ ಆಫೀಸರ್ ಅಲೋಕ್ ಕುಮಾರ್ ನೇಮಕ ಆಗ್ತಾರಾ ಎಂಬ ಪ್ರಶ್ನೆ ಮೂಡಿದ್ದು, ಒಂದು ವೇಳೆ ಆಯ್ಕೆ ಆದ್ರೆಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದು ಪಕ್ಕಾ!
ಜೈಲಿನ ಅವ್ಯವಾಹರದಿಂದ ಸರ್ಕಾರ ಮುಜಗರಕ್ಕಿಡಾಗಿದ್ದು, ಹೀಗಾಗಿ ಎಡಿಜಿಪಿ ಅಲೋಕ್ ಕುಮಾರ್ ನೆನಪಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ರಸ್ತೆ ಸುರಕ್ಷಿತೆ ಮತ್ತು ಸಂಚಾರ ರಾಜ್ಯ ಎಡಿಜಿಪಿಯಾಗಿರುವ ಅಲೋಕ್ ಕುಮಾರ್ ಅವರನ್ನ ಕಾರಾಗೃಹ ಎಡಿಜಿಪಿಯಾಗಿ ವರ್ಗಾವಣೆ ಮಾಡಲು ಸರ್ಕಾರದಲ್ಲಿ ಚಿಂತನೆ ನಡೆದಿದೆ.
ಅಲೋಕ್ ಕುಮಾರ್, ಸಿಸಿಬಿ ಮುಖ್ಯಸ್ಥರಾಗಿದ್ದಾಗ, ಕಮಿಷನರ್ ಆಗಿದ್ದಾಗ ರೌಡಿಗಳನ್ನ ಊರು ಬಿಡುವಂತೆ ಮಾಡಿದ್ರು. ಅಲೋಕ್ ಮೇಲಿನ ಭಯಕ್ಕೆ ಅದೆಷ್ಟೋ ರೌಡಿಗಳು ಊರು ಬಿಟ್ಟಿದ್ರೆ ಕೆಲ ರೌಡಿಗಳು ಜೈಲು ಸೇರಿದ್ರು. ಜೈಲಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿ ರಾಜತಿಥ್ಯ ಪಡೆಯುತ್ತಿದ್ದಾರೆ. ಹೀಗಾಗಿ ಅಲೋಕ್ ಕುಮಾರ್ ನೇಮಿಸಿ ಕಂಟ್ರೋಲ್ ತರಲು ಸರ್ಕಾರದ ಚಿಂತನೆ ನಡೆಸಿದೆ.