ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಆರಂಭದಲ್ಲಿ, ಜೈಲಿನಲ್ಲಿ ಅವರಿಗೆ ನೀಡಿದ್ದ ಕೈದಿ ನಂಬರ್ ಟ್ರೆಂಡ್ ಆಗಿತ್ತು. ಅಭಿಮಾನಿಗಳು ದರ್ಶನ್ ಕೈದಿ ಸಂಖ್ಯೆ 6106 ಸ್ಟಿಕ್ಕರ್ ಬೈಕ್ ಹಾಗೂ ವಾಹನಗಳಿಗೆ ಅಂಟಿಸಿ ಟ್ರೆಂಡ್ ಸೃಷ್ಟಿಸಿದ್ದರು. ಕೆಲವರು ಕೈದಿ ನಂಬರ್ ಅನ್ನು ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದರು.
ಅದೇ ರೀತಿ ಈಗ ದರ್ಶನ್ ಧರಿಸಿದ್ದ ಮಾದರಿಯ ಟೀ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಆರೋಪಿ ದರ್ಶನ್, ಪೂಮಾ ಟೀ ಶರ್ಟ್ ಧರಿಸಿದ್ದರು. ಅದೆ ಮಾದರಿಯ ಟಿ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿದ್ದಾರೆ. ಏಳು ಜನರ ತಂಡ ದರ್ಶನ್ ಧರಿಸಿದ ಕಪ್ಪು ಬಣ್ಣದ ಪೂಮಾ ಟೀ ಶರ್ಟ್ ಧರಿಸಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.