ಬೆಂಗಳೂರು:- ಚಲಿಸುತ್ತಿದ್ದ ಕಾರುಗಳ ಮೇಲೆ ಮರ ಬಿದ್ದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದ್ದು, ಸ್ವಲ್ಪದರಲ್ಲೇ ಚಾಲಕ ರು ಪಾರಾದರು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ನಡೆದಿದೆ. ನಿನ್ನೆ ಸಂಜೆ ಒಣಗಿದ ಬೃಹತ್ ಮರವೊಂದು ನಡುರಸ್ತೆಯಲ್ಲಿ ಉರುಳಿ ಬಿದ್ದಿದೆ. ಮೂರು ಕಾರುಗಳು ಅಡಿಗೆ ಸಿಲುಕಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಚಲಿಸುತ್ತಿದ್ದ ಕಾರುಗಳ ಮೇಲೆ ಮರ ಧರೆಗೆ ಉರುಳಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಿಬಿಎಂಪಿ ಅರಣ್ಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದು, ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.